ಸುನ್ನೀ ಕೋಓಡಿನೇಶನ್‌ಯಿಂದ ಎಂ.ಎ.ಗಫೂರ್‌ಗೆ ಸನ್ಮಾನ
ಉಡುಪಿ, ಅ.24: ಕರಾವಳಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಹಿರಿಯ ರಾಜಕೀಯ ಮುಖಂಡ ಎಂ.ಎ.ಗಫೂರ್ ಅವರನ್ನು ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟ ಸುನ್ನೀ ಕೋ-ಓಡಿನೇಶನ್ ವತಿಯಿಂದ ಅಭಿನಂದಿಸಲಾಯಿತು.
ಸಮಿತಿ ಅಧ್ಯಕ್ಷ ಕೆ.ಎ.ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ ನೇತೃತ್ವದಲ್ಲಿ ಅಂಬಾಗಿಲು ಸುನ್ನೀ ಕಛೇರಿಯಲ್ಲಿ ಗಫೂರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ಉದ್ಘಾಟಿಸಿದರು, ಜುನೈದ್ ಅರ್ರಿಫಾಯಿ ತಂಙಳ್ ರಂಗಿನಕೆರೆ ದುವಾ ನೆರವೇರಿಸಿದರು.
ನ್ಯಾಯವಾದಿ ಹಂಝತ್, ಸಯ್ಯದ್ ಫರೀದ್, ಇರ್ಷಾದ್ ಸಾಬ್ ಬಸ್ರೂರು, ಎಂ.ಎ.ಬಾವು ಹಾಜಿ, ಅಬ್ದುಲ್ ಹಮೀದ್ ಅದ್ದು, ಶೇಖ್ ನಯೀಮ್ ಕಟಪಾಡಿ, ವೈಬಿಸಿ ಬಶೀರ್ ಅಲಿ ಮೂಳೂರು, ವೈ.ಎಂ. ಇಲ್ಯಾಸ್, ಅಬ್ಬು ಮುಹಮ್ಮದ್ ಕುಂದಾಪುರ, ವಕೀಲರಾದ ಇಲ್ಯಾಸ್, ಹಬೀಬ್ ಅಲಿ, ಯು.ಜೆ.ಹನೀಫ್, ರಝಾಕ್ ಮದದಿ, ಫಾರೂಖ್ ಆರ್.ಕೆ., ಅಶ್ರಫ್ ದಾರುಸ್ಸಲಾಂ, ರಫೀಕ್ ದೊಡ್ಡಣಗುಡ್ಡೆ, ತನ್ವೀರ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಭಾನ್ ಹೊನ್ನಾಳ ಸ್ವಾಗತಿಸಿದರು. ಕೋಶಾಧಿಕಾರಿ ವಸೀಮ್ ಕುಂದಾಪುರ ವಂದಿಸಿದರು.