×
Ad

ಹಜ್ ಯಾತ್ರೆಗಾಗಿ ಮಂಗಳೂರು ಎಂಬಾರ್ಕೆಷನ್ ಸೆಂಟರ್ ಪುನರರಾಂಭಿಸಲು ಆಗ್ರಹ

Update: 2025-10-25 17:46 IST

ಉಡುಪಿ: ಭಾರತೀಯ ಹಜ್ ಕಮಿಟಿ ಮೂಲಕ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಅನುಕೂವಾಗುವಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾದಲ್ಲಿದ್ದ ಎಂಬರ್ಕೆಷನ್ ಸೆಂಟರ್‌ನ್ನು ಪುನರರಾಂಭಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ತರುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಅವರು ರಾಜ್ಯ ಪೌರಾಡಳಿತ, ಹಜ್ ಸಚಿವ ರಹೀಮ್ ಖಾನ್ ಹಾಗೂ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿಯೊಂದನ್ನು ಸಲ್ಲಿಸಿ, ಈ ಹಿಂದೆ ಕೊರೋನ ಸಮಯದಲ್ಲಿ ಮಂಗಳೂರು ನಿಲ್ದಾಣದ ಎಂಬಾರ್‌ಕೇಶನ್ ಸೆಂಟರ್‌ನ್ನು ಮುಚ್ಚಲಾ ಗಿತ್ತಾದರೂ ಭಾರತ ಹಜ್ ಕಮಿಟಿ ಮತ್ತು ಕೇಂದ್ರ ಸರಕಾರ ಪುನರರಭಿಸದೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಬೆಂಗಳೂರು ಮೂಲಕವೇ ಯಾತ್ರೆ ಕೈಗೊಳ್ಳುವಂತಾಗಿದೆ. ಇದು ಯಾತ್ರಿಕರಿಗೆ ಭಾರೀ ಅಡಚಣೆಯಾಗಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News