ರಾಜ್ಯ ಮಟ್ಟದ ಅಭಾಕಸ್ ಸ್ಪರ್ಧೆ: ತ್ರಿಷಾ ದೇವಾಡಿಗ ಪ್ರಥಮ
Update: 2025-10-26 20:05 IST
ಕುಂದಾಪುರ, ಅ.26: ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ರವಿವಾರ ಮೂಡಬಿದ್ರೆ ಆಳ್ವಾಸ್ ಪಿಯು ಕಾಲೇಜಿನ ಕೆ.ಅಮರನಾಥ ಶೆಟ್ಟಿ ವೇದಿಕೆಯಲ್ಲಿ ನಡೆದ 20ನೇ ರಾಜ್ಯ ಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ಸ್ - 2025 ಸ್ಪರ್ಧೆಯಲ್ಲಿ ಕುಂದಾಪುರ ಸೆಂಟರ್‌ನ ತ್ರಿಷಾ ಆರ್. ದೇವಾಡಿಗ ಎಫ್ ಲೆವೆಲ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಇವರು ಐಡಿಯಲ್ ಪ್ಲೇ ಅಭಾಕಸ್ ಕುಂದಾಪುರ ಸೆಂಟರ್‌ನ ಮುಖ್ಯಸ್ಥ ಪ್ರಸನ್ನ ಕೆ.ಬಿ. ಹಾಗೂ ಬೋಧಕರಾದ ಮಹಾಲಕ್ಷ್ಮೀ ಮತ್ತು ದೀಪ ಇವರಿಂದ ತರಬೇತಿ ಪಡೆದಿದ್ದು ಪ್ರಸ್ತುತ ಬ್ರಹ್ಮಾವರ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಆರನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.