ಕೆಮ್ಮಣ್ಣು: ಮಣಿಪಾಲ ಹೋಬಳಿ ಮಟ್ಟದ ಕ್ರೀಡಾಕೂಟ
ಉಡುಪಿ, ಅ.27: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬ್ರಹ್ಮಾವರ ಹಾಗೂ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಮಣಿಪಾಲ ಹೋಬಳಿ ಮಟ್ಟದ ಕ್ರೀಡಾಕೂಟ ಇತ್ತೀಚಿಗೆ ಕೆಮ್ಮಣ್ಣು ಶಾಲಾ ಕ್ರೀಡಾಂಗಣದಲ್ಲಿ ಜರಗಿತು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಸದಸ್ಯ ನಝೀರ್ ಸಾಹೇಬ್ ನೇಜಾರು ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಇಂತಹ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡರೆ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರುತ್ತಾರೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಟ್ರಸ್ಟನ ಹಿರಿಯ ಸದಸ್ಯ ಮುಹಮ್ಮದ್ ಮೌಲ ಕ್ರೀಡಾ ಧ್ವಜಾರೋಹಣ ಮಾಡಿದರು. ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್ ಕ್ರೀಡಾ ಜ್ಯೋತಿಯನ್ನು ಬೆಳೆಗಿಸಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಪ್ರಕಾಶ್, ನಾಗಾರ್ಜುನ, ಸಾಮಾಜಿಕ ಕಾರ್ಯಕರ್ತೆ ಫಾತಿಮಾ ಅಝ್ವ ಅಶ್ರ‌್, ಸಲಹಾ ಮಂಡಳಿ ಸದಸ್ಯರಾದ ನಕ್ವಾ ಅಬ್ದುರ್ ರಝಾಕ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಕೆಮ್ಮಣ್ಣು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಲಕ್ಷ್ಮೀನಾರಾಯಣ, ಮುಖ್ಯ ಶಿಕ್ಷಕಿ ವಂದನಾ, ದೈಹಿಕ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಸಾಮಂತ, ಶಿಕ್ಷಕಿ ಯಾಸ್ಮಿನ್ ಬಾನು, ಲವೀನ ಕ್ಲಾರ, ದೈಹಿಕ ಶಿಕ್ಷಕಿ ಮಮತಾ ಉಪಸ್ಥಿತರಿದ್ದರು.
ಸಾಲಿಹಾತ್ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕಿಯರು ಪ್ರಾರ್ಥನೆಗೈದರು. ಶಿಕ್ಷಣ ಸಂಸ್ಥೆಯ ಆಡಳಿತಾಧಿ ಕಾರಿ ಅಸ್ಲಂ ಹೈಕಾಡಿ ಸ್ವಾಗತಿಸಿದರು. ಬ್ರಹ್ಮಾವರ ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ಮುಖ್ಯಶಿಕ್ಷಕ ಅಬ್ದುಲ್ ಹಸೀಬ್ ತರಫ್ದರ್ ವಂದಿಸಿದರು. ದೈಹಿಕ ಶಿಕ್ಷಕಿ ಮೇರಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಸಮರೋಪ ಸಮಾರಂಭದಲ್ಲಿ ಸಿಆರ್‌ಪಿ ಪದ್ಮಾವತಿ ಸಮಗ್ರ ಪಶಸ್ತಿ ಹಾಗೂ ಚಾಂಪಿಯನ್ ಗಳಿಸಿದ ಕ್ರೀಡಾಪಟುಗಳಿಗೆ ಸನ್ಮಾನಿಸಿದರು.