ಅಂದರ್ ಬಾಹರ್ ಜುಗಾರಿ: ನಾಲ್ವರ ಬಂಧನ
Update: 2025-10-27 20:58 IST
ಕುಂದಾಪುರ, ಅ.27: ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಕುಂದಾಪುರ ಪೊಲೀಸರು ಕಾವ್ರಾಡಿ ಗ್ರಾಮದ ಮರಾಸಿ ರಸ್ತೆಯಲ್ಲಿ ಹಾಡಿಯಲ್ಲಿ ಅ.26ರಂದು ಸಂಜೆ ವೇಳೆ ಬಂಧಿಸಿದ್ದಾರೆ.
ದೇವಲ್ಕುಂದ ಗ್ರಾಮದ ಬಾಳಿಕೆರೆಯ ಅನಿಲ್(31), ಪೂರ್ಣೇಶ(25), ಯೋಗೀಶ(39), ಕೆಂಚನೂರಿನ ರಘು(39) ಬಂಧಿತ ಆರೋಪಿಗಳು. ಇವರಿಂದ 2480ರೂ. ನಗದು, ಒಂದು ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.