×
Ad

ದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ಕೊಡುವ ಬಜೆಟ್: ಸಂಸದ ಕೋಟ

Update: 2026-02-01 20:20 IST

ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಅತ್ಯಂತ ಪರಿಷ್ಕೃತವಾದ, ಸಮಾಜ ಸರ್ವರು ಒಪ್ಪಿಕೊಳ್ಳುವ ಹಾಗೂ ಎಲ್ಲ ವರ್ಗದ ಜನವರಿಗೆ ಅನುಕೂಲವಾಗುವ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ಕೊಡುವ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ಹಲವು ಯೋಜನೆ ಹಾಗೂ ಯೋಚನೆಗಳನ್ನು ಪರಿಚಯಿಸಲಾಗಿದೆ. ಬಡವರ ಹೆಣ್ಣು ಮಕ್ಕಳಿಗೆ ಹಾಸ್ಟೆಲ್, ಮಾರಕ ಕಾಯಿಲೆಗಳ ಔಷಧಿಗಳಿಗೆ ರಿಯಾಯಿತಿ, ದೇಶದ ಅನೇಕ ಕಡೆಗಳಲ್ಲಿ ಹೊಸ ಮೆಡಿಕಲ್ ಕಾಲೇಜು, ಹಬ್ ಸ್ಥಾಪನೆ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಹೈ ಸ್ರೀಡ್ ರೈಲು ಪರಿಚಯ, ರಾಷ್ಟ್ರೀಯ ಹೆದ್ದಾರಿ ಒತ್ತು ಕೊಡುವ ಕಾರ್ಯ ಮಾಡಲಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ ಹೆಚ್ಚಿನ ಅನುದಾನ ಮೀಸಲಿರಿಸಿ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News