×
Ad

ಉಡುಪಿ| ಎನ್‌ಎಸ್‌ಯುಐ ಮುಖಂಡನ ಮೇಲೆ ತಲವಾರು ದಾಳಿ: ಪ್ರಕರಣ ದಾಖಲು

Update: 2026-02-01 20:35 IST

 ಶರತ್ ಕುಂದರ್

ಉಡುಪಿ, ಫೆ.1: ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ, ಬೈಲೂರು ಚಿಟ್ಪಾಡಿ ನಿವಾಸಿ ಶರತ್ ಕುಂದರ್(25) ಎಂಬವರ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಜ.30ರಂದು ರಾತ್ರಿ ನಗರದ ಪಿಪಿಸಿ ಕ್ರಾಸ್ ಬಳಿ ನಡೆದಿದೆ.

ಇವರು ಮಣಿಪಾಲಕ್ಕೆ ಹೋಗಿದ್ದು, ಅಲ್ಲಿ ಇವರ ಸ್ನೇಹಿತರಾದ ಅಕ್ಷತ್ ಪೈ, ಶಶಾಂಕ್ ಹಾಗೂ ಉಡುಪಿಯ ರಾಧಾಕೃಷ್ಣ ಜನರಲ್ ಸ್ಟೋರ್‌ನ ಮಾಲಕ ರಾಧಾಕೃಷ್ಣ ಪೈ ಎಂಬವರ ಮಗ ರಮಾನಂದ ಪೈ ಇದ್ದರು. ಈ ವೇಳೆ ಶರತ್ ಕುಂದರ್ ಕೈಗೆ ರಮಾನಂದ ಪೈಯ ಕೈ ತಾಗಿದ್ದು, ಆಗ ಇವರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ನಂತರ ಶರತ್ ಕುಂದರ್ ವಾಪಾಸು ಮನೆಗೆ ಹೊರಡುವಾಗ ಅಕ್ಷತ್‌ಕರೆ ಮಾಡಿ, ಗಲಾಟೆ ಬಗ್ಗೆ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ಬರುವಂತೆ ತಿಳಿಸಿದನು. ಅದರಂತೆ ಶರತ್ ಕುಂದರ್, ಧ್ರುವ, ಸಿಲಾನ್ ಗಗನ್, ರೋಹಿತ್ ಪಿಪಿಸಿ ರಸ್ತೆಯ ಕೋಸ್ಟಲ್ ಚಿಕನ್ ಅಂಗಡಿಯ ಎದರು ನಿಂತಿದ್ದರು. ಆಗ ಅಲ್ಲಿಗೆ ವಾಹನಗಳಲ್ಲಿ ತಲವಾರು, ರಾಡ್ ಹಿಡಿದುಕೊಂಡು ರಮಾನಂದ ಪೈ, ಅಕ್ಷತ್ ಪೈ, ಶಶಾಂಕ ಹಾಗೂ ಇತರ 6-7 ಮಂದಿ ಬಂದರು. ರಮಾನಂದ ಪೈ ತಲವಾರಿನಿಂದ ಬೀಸಿದಾಗ ಶರತ್ ಕೈಗೆ ತಾಗಿ ಗಾಯವಾಗಿದೆ. ಈ ವೇಳೆ ಶರತ್ ಸ್ನೇಹಿತರು ಬೊಬ್ಬೆ ಹಾಕಿದಾಗ ಆರೋಪಿಗಳು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋದರೆನ್ನ ಲಾಗಿದೆ. ಗಾಯಗೊಂಡಿರುವ ಶರತ್ ಉಡುಪಿವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News