ಪ್ರತ್ಯೇಕ ಪ್ರಕರಣ: ಮೂವರು ಆತ್ಮಹತ್ಯೆ
ಮಣಿಪಾಲ, ಫೆ.2: ವೈಯಕ್ತಿಕ ಕಾರಣದಿಂದ ಮನನೊಂದ ಮಣಿಪಾಲದ ಕಲ್ಕುಡ ಅಪಾರ್ಟಮೆಂಟ್‌ನ ಕೆಳಗಡೆ ಬಾಡಿಗೆ ಮನೆಯ ನಿವಾಸಿ ಗ್ಯಾನೇಂದ್ರ ಖಾತ್ರಿ ಎಂಬವರ ಪತ್ನಿ ಶಾಂತಿ ಖಾತ್ರಿ(25) ಎಂಬವರು ಫೆ.1ರಂದು ಸಂಜೆ ವೇಲೆ ಮನೆಯ ಶೀಟಿನ ರಾಡ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಮದ್ಯಪಾನ ಮಾಡುವ ಚಟ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕೆರೆಬೆಟ್ಟು ಗ್ರಾಮದ ಅಸ್ರಂಬಳ್ಳಿ ನಿವಾಸಿ ಜಗದೀಶ್ ಆಚಾರ್ಯ(54) ಎಂಬವರು ಫೆ.1ರಂದು ರಾತ್ರಿ ವೇಳೆ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಅನಾರೋಗ್ಯ ಹಾಗೂ ಪತ್ನಿ ಮಗಳು ತೀರಿಕೊಂಡ ಬಗ್ಗೆ ಚಿಂತೆಯಲ್ಲಿ ಮಾನಸಿಕವಾಗಿ ನೊಂದ ಬೇಳೂರು ಗ್ರಾಮದ ಬಡಾಬೆಟ್ಟು ನಿವಾಸಿ ಶಿವರಾಮ ಶೆಟ್ಟಿ (78) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.2ರಂದು ಬೆಳಗಿನ ಜಾವ ಮನೆಯ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.