ರಿಕ್ಷಾ ಢಿಕ್ಕಿ: ಪಾದಚಾರಿ ಮೃತ್ಯು, ಮೂವರಿಗೆ ಗಾಯ
ಬ್ರಹ್ಮಾವರ, ಫೆ.2: ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಫೆ.1ರಂದು ರಾತ್ರಿ 8ಗಂಟೆ ಸುಮಾರಿಗೆ ಹೇರೂರು ಗ್ರಾಮದ ಕೊಳಂಬೆ ಬಸ್ಸ್ ನಿಲ್ದಾಣದ ಸಮೀಪ ನಡೆದಿದೆ.
ಮೃತರನ್ನು 52ನೇ ಹೇರೂರು ಗ್ರಾಮದ ಕೊಳಂಬೆ ನಿವಾಸಿ ರಿಚ್ಚರ್ಡ್ ಡಿಸೋಜ(70) ಎಂದು ಗುರುತಿಸಲಾಗಿದೆ. ರಿಕ್ಷಾ ಚಾಲಕ ಜಗದೀಶ್ ಪೂಜಾರಿ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅವರ ಪತ್ನಿ ಗೌರಿ ಮತ್ತು ಮಗಳು ಜನ್ಯ ಎಂಬವರು ಗಾಯಗೊಂಡು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೇತ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ರಿಕ್ಷಾ, ರಸ್ತೆಯನ್ನು ದಾಟಲು ರಸ್ತೆ ಬದಿ ನಿಂತಿದ್ದ ರಿಚರ್ಡ್ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ರಿಕ್ಷಾ ರಸ್ತೆಯಲ್ಲಿ ಪಲ್ಟಿಯಾಯಿತ್ತೆನ್ನಲಾಗಿದೆ. ಇದರಲ್ಲಿ ಗಂಭೀರವಾಗಿ ಗಾಯ ಗೊಂಡ ರಿಚರ್ಡ್ ಡಿಸೋಜ, ಫೆ.2ರಂದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.