ಬೈಕ್ ಸ್ಕಿಡ್: ಸವಾರ ಮೃತ್ಯು
Update: 2026-02-02 21:25 IST
ಗಂಗೊಳ್ಳಿ, ಫೆ.3: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಓರ್ವ ಸವಾರ ಮೃತಪಟ್ಟ ಘಟನೆ ಫೆ.1ರಂದು ರಾತ್ರಿ 10.45ರ ಸುಮಾರಿಗೆ ನಾಡ ಗ್ರಾಮದ ಗುಡ್ಡೆ ಹೊಟೇಲ್ ಬಳಿ ನಡೆದಿದೆ.
ಮೃತರನ್ನು ಪ್ರಭಾಕರ ಎಚ್ ಮೆಂಡನ್(58) ಎಂದು ಗುರುತಿಸಲಾಗಿದೆ. ಇವರು ಆಲೂರಿಗೆ ಹೋಗುವ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗು ತ್ತಿದ್ದ ಬೈಕ್, ಸ್ಕಿಡ್ ಆಯಿತ್ತೆನ್ನಲಾಗಿದೆ. ಇದರಿಂದ ಪ್ರಭಾಕರ್, ರಸ್ತೆಯ ಎಡದಿಂದ ಬಲಭಾಗಕ್ಕೆ ಬೈಕ್ ಸಮೇತ ಎಸೆಯಲ್ಪಟ್ಟರು. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರು ಮಧ್ಯರಾತ್ರಿ ವೇಳೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.