×
Ad

ಉಡುಪಿ ನಗರದಲ್ಲಿ ಮೊದಲ ಮಳೆಯ ಅನುಭವ

Update: 2026-05-07 21:06 IST

ಉಡುಪಿ, ಮೇ 7: ಉಡುಪಿ ನಗರ ಹಾಗೂ ಕಾಪು ಪಟ್ಟಣಗಳು ಇಂದು ಬೆಳಗ್ಗೆ 10 ಗಂಟೆಯ ಬಳಿಕ ವರ್ಷದ ಮೊದಲ ಮುಂಗಾರು ಪೂರ್ವ ಮಳೆಯನ್ನು ಕಂಡವು. ಗುಡುಗು, ಸಿಡಿಲು ಸಹಿತ ಮಳೆ ಧಾರಾಕಾರವಾಗಿ ಮಳೆ ಸುರಿಯಿತು. ಇಡೀ ನಗರಸಭಾ ವ್ಯಾಪ್ತಿಯಲ್ಲಿ ಮಳೆಯ ಸಿಂಚವಾಗದಿದ್ದರೂ, ಅಲ್ಲಲ್ಲಿ ಉತ್ತಮ ಮಳೆಯಾಯಿತು. ಕಲ್ಸಂಕ ಆಸು ಪಾಸಿನಲ್ಲಿ ನೀರು ರಸ್ತೆಯ ಮೇಲೆ ಹರಿದು ಜನತೆಗೆ ಮಳೆಗಾಲದ ಮೊದಲ ಅನುಭವ ನೀಡಿತು.

ಉಡುಪಿ ನಗರ, ಮಣಿಪಾಲ, ಅಲೆವೂರು, ಸಂತೆಕಟ್ಟೆ, ಕಟಪಾಡಿ, ಕಾಪುಗಳಲ್ಲಿ ಉತ್ತಮ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಭಾರೀ ಗಾತ್ರದ ಮರಗಳು ಧರಾಶಾಹಿಯಾಗಿರುವುದು ಕಂಡುಬಂತು. ಮಳೆ ಪ್ರಾರಂಭವಾಗುತಿದ್ದಂತೆ ವಿದ್ಯುತ್ ಕೂಡಾ ಕೈಕೊಟ್ಟಿತು. ಅನಿರೀಕ್ಷಿತವಾಗಿ ಮಳೆ ಸುರಿದಿದ್ದರಿಂದ ವಿವಿಧ ಕೆಲಸದ ಮೇಲೆ ನಗರದಲ್ಲಿದ್ದವರು ಮಳೆಗೆ ಒದ್ದೆಮುದ್ದೆಯಾದರು.

ಆದರೆ ನಿರಂತರವಾಗಿ ಮಳೆ ಸುರಿಯದ ಕಾರಣ ಸೆಕೆಯ ಧಗೆ ಮಾತ್ರ ಕಡಿಮೆಯಾಗಲೇ ಇಲ್ಲ. ಉಡುಪಿ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಪೂರ್ವ ಮಳೆ ಬಾರದ ಕಾರಣ ಕೃಷಿ ಚಟುವಟಿಕೆಗಳಿಗೆ ಇನ್ನು ಚಾಲನೆ ದೊರಕಿಲ್ಲ.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News