×
Ad

ಬೈಂದೂರು: ಮನೆಗಳ್ಳತನದ ಆರೋಪಿ ಸೆರೆ, ಆರು ಲಕ್ಷ ರೂ. ನಗದು ವಶ

Update: 2026-05-07 21:18 IST

ಬೈಂದೂರು, ಮೇ 7: ಎ.23ರಂದು ಅಪರಾಹ್ನ ಮೂರು ಗಂಟೆ ಯಿಂದ ರಾತ್ರಿ 10ಗಂಟೆನ ಮದ್ಯಾವಧಿಯಲ್ಲಿ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಎಸ್‌ಬಿಐ ಬ್ಯಾಂಕ್ ಹಿಂಭಾಗದಲ್ಲಿರುವ ರಾಜಸ್ತಾನ್ ಮೂಲದ ರಾವಲ್ ಸಿಂಗ್ ಎಂಬವರು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಮನೆಯೊಳಗಿನ ಗೋಡ್ರೆಜ್‌ನಲ್ಲಿರಿಸಿದ್ದ ಆರು ಲಕ್ಷ ರೂ.ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬೈಂದೂರು ವೃತ್ತನಿರೀಕ್ಷಕ ಶಿವಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತನನ್ನು ಸದ್ಯ ಬೈಂದೂರು ಬಂಕೇಶ್ವರದ ಸ್ಟಿಫನ್ ಎಂಬವರ ಮನೆಯಲ್ಲಿ ವಾಸವಾಗಿರುವ ರಾಜಸ್ತಾನದ ಜೋಧ್‌ಪುರ ಜಿಲ್ಲೆಯ ಸಿರಿಗ್ರಾತ್ ತಾಲೂಕಿನ ಸೇತ್ರಾವ್‌ನ ಮಹೇಂದ್ರ ಸೈನ್ (23) ಎಂದು ಗುರುತಿಸಲಾಗಿದೆ.

ಪ್ರಕರಣದ ತನಿಖೆಗಾಗಿ ನೇಮಕಗೊಂಡ ವಿಶೇಷ ತಂಡ ಇಂದು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದು, ಆತನಿಂದ ಕಳವು ಮಾಡಿರುವ ಆರು ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದೆ. ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News