×
Ad

ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಶಿಕ್ಷಕ - ರಕ್ಷಕರ ಸಭೆ

Update: 2026-05-22 19:10 IST

ಮಲ್ಪೆ, ಮೇ 22: ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನ ಆರಂಭದ ಅಂಗವಾಗಿ ಶಿಕ್ಷಕ-ರಕ್ಷಕರ ಸಭೆ ಮೇ 20ರಂದು ಶಾಲೆಯಲ್ಲಿ ನಡೆಯಿತು.

‘ಜೊತೆಯಲ್ಲೇ ಅರಳೋಣ’ ಎಂಬ ಶೀರ್ಷಿಕೆಯಡಿಯಲ್ಲಿ ಮಾಹೆಯ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿ ಸಮಾಲೋಚಕ ಡಾ.ರಯಾನ್ ಮಥಾಯಸ್ ಪೋಷಕರಿಗೆ ಹದಿಹರೆಯದ ಮಕ್ಕಳ ಮನೋಲೋಕ, ಮೊಬೈಲ್ ವ್ಯಸನ, ಪೋಷಕರ ಜವಾಬ್ದಾರಿ ಹಾಗೂ ಆಧುನಿಕ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಶಾಲಾ ಕಾರ್ಯದರ್ಶಿ ಖತೀಬ್ ಅಲ್ತಾಫ್, ಉಪಾಧ್ಯಕ್ಷ ಶಬ್ಬೀರ್, ಆಡಳಿತಾಧಿಕಾರಿ ಅಕ್ತರ್, ಅರೇಬಿಕ್ ಮತ್ತು ಇಸ್ಲಾಮಿಕ್ ವಿಭಾಗದ ಮುಖ್ಯಸ್ಥ ಮೌಲಾನಾ ಇಮ್ರಾನುಲ್ಲಾ ಖಾನ್, ಶಿಕ್ಷಕ-ರಕ್ಷಕರ ಸಂಘದ ಅಧ್ಯಕ್ಷೆ ಉಮ್ಮೆ ಸಲ್ಮಾ ಖಲೀಫಾ ಹಾಗೂ ಉಪಾಧ್ಯಕ್ಷೆ ಗುಲ್ ಶನ್ ಬಾನು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಾಲೆಯ ನೂತನ ವೆಬ್‌ಸೈಟ್ ಲೋಕಾರ್ಪಣೆ ಹಾಗೂ ಇ.ಆರ್.ಪಿ ವ್ಯವಸ್ಥೆಯ ಅಳವಡಿಕೆಯನ್ನು ನೆರವೇರಿಸಲಾಯಿತು. ಶಾಲಾ ಕಂಪ್ಯೂಟರ್ ಶಿಕ್ಷಕಿ ತನ್ವೀನ್ ಪೋಷಕರಿಗೆ ಇಆರ್‌ಪಿ ವ್ಯವಸ್ಥೆಯ ಉಪಯೋಗ, ಪೇರೆಂಟ್ಸ್ ಆ್ಯಪ್ ಬಳಕೆ ಹಾಗೂ ಡಿಜಿಟಲ್ ಸಂವಹನ ವ್ಯವಸ್ಥೆಗಳ ಕುರಿತು ವಿವರಿಸಿದರು.

ಶಿಕ್ಷಕಿ ರೆಹನಾ ಸ್ವಾಗತಿಸಿದರು. ಪ್ರಾಂಶುಪಾಲ ಮೊಹಮ್ಮದ್ ನಾಸಿರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರೇಶ್ಮಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ವಿನುತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News