ಉಡುಪಿ| ಕೊಡವೂರು ಬಳಿ ಬಾವಿ ಕುಸಿತ: ಮಣ್ಣಿನಡಿ ಸಿಲುಕಿರುವ ಕಾರ್ಮಿಕ
Update: 2026-05-22 19:35 IST
ಉಡುಪಿ, ಮೇ 22: ಕಾಮಗಾರಿ ವೇಳೆ ಬಾವಿ ಕುಸಿದ ಪರಿಣಾಮ ಓರ್ವ ಕಾರ್ಮಿಕ ಮಣ್ಣಿನಡಿ ಸಿಲುಕಿರುವ ಘಟನೆ ಕೊಡವೂರು ಸಮೀಪ ಇಂದು ಸಂಜೆ ನಡೆದಿದೆ.
ನಾಲ್ಕೈದು ಕಾರ್ಮಿಕರು ಹೊಸ ಬಾವಿ ತೊಡುವ ಕಾರ್ಯ ನಡೆಸುತ್ತಿದ್ದು, ಈ ವೇಳೆ ಒಮ್ಮೇಲೆ ಬಾವಿಯ ಮಣ್ಣು ಕುಸಿಯಿತ್ತೆನ್ನಲಾಗಿದೆ. ಇದರ ಪರಿಣಾಮ ಓರ್ವ ಕಾರ್ಮಿಕ ಮಣ್ಣಿನೊಳಗೆ ಸಿಲುಕಿರುವುದಾಗಿ ತಿಳಿದು ಬಂದಿದೆ. ಉಳಿದ ಇಬ್ಬರು ಕಾರ್ಮಿಕರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.
ಸ್ಥಳಕ್ಕೆ ಮಲ್ಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ ಸಿಲುಕಿರುವ ಕಾರ್ಮಿಕನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.