×
Ad

ವಿದ್ಯಾರ್ಥಿ - ಶಿಕ್ಷಕರ ಪುನರ್ಮಿಲನ ಕಾರ್ಯಕ್ರಮ

Update: 2026-05-22 19:16 IST

ಉಡುಪಿ, ಮೇ 22: ಉಡುಪಿ ಕುಂಜಿಬೆಟ್ಟಿನ ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾ ವಿದ್ಯಾಲಯದ 1985-86ನೇ ಸಾಲಿನ ವಿದ್ಯಾರ್ಥಿ ಶಿಕ್ಷಕರ ಪುನರ್ಮಿಲನ ಕಾರ್ಯಕ್ರಮವು ಇತ್ತೀಚೆಗೆ ಜರಗಿತು.

ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಮಹಾಬಲೇಶ್ವರ ಹೆಬ್ಬಾರ್ ವಹಿಸಿದ್ದರು. ಮಹಾ ವಿದ್ಯಾಲಯದ ಸಮನ್ವಯಾಧಿಕಾರಿ ಮಹಾಬಲೇಶ್ವರ ರಾವ್, ದಿವಾಕರ ಶೆಟ್ಟಿ, ಅರುಣ ಶೆಟ್ಟಿ, ಪುತ್ತು ನಾಯ್ಕ್, ಚಿತ್ರಲೇಖಾ, ಜೋಯ್ಸ್ ಡೇಸಾ, ಶಶಿಕಲಾ ರಾಜವರ್ಮ, ರಾಜೇಶ್ವರಿ ಮಾತನಾಡಿದರು.

ಈ ಸಂದರ್ಭದಲ್ಲಿ ಗುರುವಂದನೆ ಸಲ್ಲಿಸಲಾಯಿತು. ಅಹಲ್ಯಾ ರಾವ್ ಪ್ರಾರ್ಥಿಸಿದರು. ನಿರ್ಮಲಾ ರಾವ್ ಸ್ವಾಗತಿಸಿದರು. ಹರಿಕೃಷ್ಣ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ನಳಿನಾದೇವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News