×
Ad

ಹೆಮ್ಮಾಡಿ: ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ

Update: 2026-05-22 19:13 IST

ಕುಂದಾಪುರ: ಕುಂದಾಪುರದ ಎಲ್.ಜಿ. ಫೌಂಡೇಶನ್ ವತಿಯಿಂದ ’ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಹೆಮ್ಮಾಡಿಯ ಹೊಸಕಳಿಯ ಬೊಬ್ಬರ್ಯ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಶೈಕ್ಷಣಿಕ ಸಾಧನೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಇತರ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ನಾಲ್ವರು ವಿದ್ಯಾರ್ಥಿಗಳಾದ ರಿಷಿಕಾ ದೇವಾಡಿಗ, ಶ್ರಾವ್ಯ ಜಿ. ದೇವಾಡಿಗ, ವರ್ಷಾ ಕೆ.ದೇವಾಡಿಗ, ರಶ್ಮಿತಾ ರವಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಎಲ್.ಜಿ. ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ನಾಗರಾಜ್ ಪಡುಕೋಣೆ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗುವ ಸಮಾಜಮುಖಿ ಚಿಂತನೆಯೊಂದಿಗೆ ಫೌಂಡೇಶನ್ ಕಾರ್ಯಚರಿಸುತ್ತಿದೆ. ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ತಿಳಿಸಿದರು.

ಕಾರ್ಯಕ್ರಮವನ್ನು ಹೆಮ್ಮಾಡಿಯ ನಿವೃತ್ತ ಮುಖ್ಯೋಪಾಧ್ಯಾಯ ನಂದಿ ದೇವಾಡಿಗ ಉದ್ಘಾಟಿಸಿದರು. ಉಡುಪಿಯ ವೈದ್ಯ ಹಾಗೂ ಸಮಾಜಮುಖಿ ಚಿಂತಕ ಡಾ.ಮಧುಕರ್ ದೇವಾಡಿಗ ಮಾತನಾಡಿದರು. ಪ್ರತಿಭಾವಂತ ಹಾಗೂ ಆರ್ಥಿಕವಾಗಿ ನೆರವು ಅಗತ್ಯವಿದ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮುಂಬೈನ ಉದ್ಯಮಿ ಜನಾದರ್ನ ದೇವಾಡಿಗ ಉಪ್ಪುಂದ, ಎಲ್.ಜಿ.ಫೌಂಡೇಶನ್ ಟ್ರಸ್ಟಿಗಳಾದ ಲಚ್ಚು ದೇವಾಡಿಗ, ಕುಸುಮಾ ದೇವಾಡಿಗ, ಗುರುಕೃತಿಕ್ ದೇವಾಡಿಗ, ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ, ಹೊಸಕಳಿಯ ದೈವದ ಪಾತ್ರಿಗಳಾದ ಚಿಕ್ಕಯ್ಯ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಸುರೇಶ್ ದೇವಾಡಿಗ, ದಿನಕರ ದೇವಾಡಿಗ, ಮಹಾಲಿಂಗ ದೇವಾಡಿಗ, ಅಭಿಷೇಕ್ ದೇವಾಡಿಗ ಅವರನ್ನು ಗುರುತಿಸ ಲಾಯಿತು. ಬೈಂದೂರಿನ ರಾಮ ದೇವಾಡಿಗ ಕಾರ್ಯಕ್ರಮ ಸಂಯೋಜಿಸಿದ್ದರು. ಪುರುಷೋತ್ತಮ ದಾಸ್ ಸ್ವಾಗತಿಸಿದರು. ನಿಹಾರಿಕ ದೇವಾಡಿಗ ಪ್ರಾರ್ಥಿಸಿದರು. ರಾಘವೇಂದ್ರ ದೇವಾಡಿಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News