×
Ad

ಪ್ರತಿ ಮನೆಯಲ್ಲೂ ಜ್ಞಾನದ ಸಂಕೇತ ಗ್ರಂಥಾಲಯ ಅಗತ್ಯ: ಡಾ.ಮಾನಸ

Update: 2026-05-22 21:27 IST

ಉಡುಪಿ, ಮೇ 22: ಭಕ್ತಿಯ ಸಂಕೇತವಾಗಿ ಪ್ರತಿಮನೆಯಲ್ಲಿ ದೇವರ ಮನೆ ಇರುವಂತೆ ಜ್ಞಾನದ ಸಂಕೇತವಾಗಿ ಪ್ರತಿ ಮನೆಯಲ್ಲೂ ಪುಸ್ತಕ ಮನೆ(ಗ್ರಂಥಾಲಯ) ಇರಬೇಕು ಎಂದು ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಮನೆಗೊಂದು ಗ್ರಂಥಾಲಯ ಯೋಜನೆಗೆ ಶ್ರೀಕೃಷ್ಣ ಮಠದ ಬಳಿಯ ವಾದಿರಾಜ ರಸ್ತೆಯಲ್ಲಿ ರುವ ಉಡುಪಿ ಟೆಂಪಲ್ ಇನ್ ಹೋಮ್ ಸ್ಟೇ ಯಲ್ಲಿ ಗಿಡಕ್ಕೆ ನೀರೆರೆದು ಗುರುವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಪುಸ್ತಕ ಓದಿನಿಂದ ಬದುಕಿನ ಸವಾಲು ಎದುರಿಸಿ ಗೆಲ್ಲಬಹುದು. ಮನೆಗೊಂದು ಗ್ರಂಥಾಲಯ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ 10ಜನರ ಜಿಲ್ಲಾ ಜಾಗೃತಿ ಸಮಿತಿ ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದರು.

ಮನೆಯೇ ಗ್ರಂಥಾಲಯ ಯೋಜನೆ ಸಂಘಟಕ ರವಿರಾಜ್ ಎಚ್. ಪಿ. ಮಾತನಾಡಿ, ಬಸ್ ನಿಲ್ದಾಣ, ಆಸ್ಪತ್ರೆ, ಐಸ್‌ಕ್ರೀಮ್ ಅಂಗಡಿಗಳ ಸಹಿತ ಉಡುಪಿ ಜಿಲ್ಲೆಯ 210 ಮನೆಗಳಲ್ಲಿ ಗ್ರಂಥಾಲಯ ನಿರ್ಮಾಣವಾಗಿದೆ ಎಂದು ಹೇಳಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಪ್ನಾ ಹಾಲಿಡೇಸ್ ಆಡಳಿತ ನಿರ್ದೇಶಕ ನಾಗರಾಜ್ ಹೆಬ್ಬಾರ್ ಮರವಂತೆ, ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಉಪಸ್ಥಿತರಿದ್ದರು.

ಮನೆಗೊಂದು ಗ್ರಂಥಾಲಯ ಉಡುಪಿ ಜಿಲ್ಲಾ ಜಾಗೃತಿ ಸಮಿತಿ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾ ಯಿತು. ಜನಾರ್ದನ ಕೊಡವೂರು ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಜನಾರ್ದನ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News