×
Ad

ಕಟಪಾಡಿಯಲ್ಲಿ ಹಲಸು ಮೇಳ

Update: 2026-05-22 22:09 IST

ಉಡುಪಿ, ಮೇ22: ಕಟಪಾಡಿಯ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ಮೇ 24ರವರೆಗೆ ಹಲಸು ಮತ್ತು ಹಣ್ಣು ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಚಂದ್ರ ಹಲಸು, ಕೇಸರ್ ಹಲಸು, ಏಕದಶಿ ಹಾಗೂ ರುದ್ರಾಕ್ಷಿ ಈ ನಾಲ್ಕು ತಳಿಯ ಹಲಸು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ.

ಹಲಸಿನ ಹಣ್ಣನ್ನು ಆಂಧ್ರಪ್ರದೇಶದಿಂದ ತರಿಸಲಾಗಿದೆ. ಇದರ ಜೊತೆಗೆ ಹಲಸಿನ ಸಂಡಿಗೆ, ಹಪ್ಪಳ, ದೋಸೆ, ಹೋಳಿಗೆ, ಜಿಲೇಬಿ ಹಾಗೂ ವಿವಿಧ ಹಲಸಿನ ಉತ್ಪನ್ನಗಳ ಮಾರಾಟ ನಡೆಯಲಿದೆ. ಮೇಳದಲ್ಲಿ ಹಲವು ಸ್ಟಾಲ್ ಗಳು ಇರಲಿದ್ದು, ಹಲಸಿನ ಹಣ್ಣಿನ ಸ್ಟಾಲ್ ಜೊತೆಗೆ ಮಾವಿನ ಹಣ್ಣು, ಕಲ್ಲಂಗಡಿ, ಫೈನಾಫಲ್ ಹಣ್ಣಿನ ಸ್ಟಾಲ್ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News