ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
Update: 2026-05-22 22:14 IST
ಕುಂದಾಪುರ, ಮೇ 22: ಅನಾರೋಗ್ಯದಿಂದ ಬಳಲುತ್ತಿದ್ದ ಹಂಗಳೂರು ಗ್ರಾಮದ ಗೋಪಾಲಾಡಿ ಅಂಕದಕಟ್ಟೆ ನಿವಾಸಿ ರಾಘವೇಂದ್ರ(41) ಎಂಬವರು ಜಿಗುಪ್ಸೆಗೊಂಡು ಮೇ 22ರಂದು ಬೆಳಗ್ಗೆ ನೇರಂಬಳ್ಳಿ ಗೋವೆಬೆಟ್ಟು ಎಂಬಲ್ಲಿರುವ ತನ್ನ ಹಳೆಯ ಮನೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಅನಾರೋಗ್ಯದಿಂದ ಬಳಲುತ್ತಿದ್ದ ಅಲೆವೂರು ಗ್ರಾಮದ ಪ್ರಗತಿನಗರದ ಮಂಜಣ್ಣ(74) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮೇ 21ರಂದು ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದೇ ವೇಳೆ ಮನೆಯ ಸಿಮೆಂಟ್ ಶೀಟಿನ ಛಾವಣಿಯ ಅಡ್ಡ ಕಂಬಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.