ನೆಮ್ಮದಿ ಕಸಿದುಕೊಳ್ಳುವ ತಂಬಾಕಿನಿಂದ ದೂರವಿರಬೇಕು: ಚಂದ್ರ ಪಿ.
ಕುಂದಾಪುರ, ಜೂ.2: ಬದುಕನ್ನು ದುರ್ಬಲಗೊಳಿಸಿ, ಜೀವನದ ನೆಮ್ಮದಿಯನ್ನು ಕಸಿದುಕೊಳ್ಳುವ ತಂಬಾಕು ಹಾಗೂ ಇತರ ಮಾದಕ ವಸ್ತುಗಳ ಸೇವನೆಯ ದುಶ್ಚಟ ಹಾಗೂ ಮಾರಾಟದಿಂದ ವಿದ್ಯಾರ್ಥಿ ಸಮುದಾಯ ದೂರವಿರ ಬೇಕೆಂದು ಗಂಗೊಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಚಂದ್ರ ಪಿ. ಹೇಳಿದ್ದಾರೆ.
ನಾಡಾ ರೇ.ಫಾ.ರೋಬರ್ಟ್ ಝೆಡ್ ಎಂ.ಡಿಸೋಜ ಸ್ಮಾರಕ ಐಟಿಐ ಸಂಸ್ಥೆಯಲ್ಲಿ ಸೋಮವಾರ ನಡೆದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ವಿಶ್ವ ತಂಬಾಕು ದಿನಾಚರಣೆಯ ಮೂಲಕ ತಂಬಾಕು ವ್ಯಸನಿಗಳಲ್ಲಿ ಜಾಗೃತೆ ಮೂಡಿಸುವ ಕೆಲಸ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ. ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯ ಕುರಿತು ಮಾಹಿತಿ ಗಳು ಇದ್ದಾಗ ನೇರವಾಗಿ ಪೊಲೀಸರು ಅಥವಾ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವ ಕೆಲಸ ವಿದ್ಯಾರ್ಥಿ ಗಳಿಂದ ಆಗಬೇಕು. ಇದರಿಂದಾಗಿ ಎಷ್ಟೋ ಕುಟುಂಬದ ನೆಮ್ಮದಿಯನ್ನು ಕಾಪಾಡಲು ಸಾಧ್ಯ ಎಂದರು.
ಸಂಸ್ಥೆಯ ಕಿರಿಯ ತರಬೇತು ಅಧಿಕಾರಿಗಳಾದ ಮೋಹನ್ಚಂದ್ರ ಪಿ. ನಾಯಕ್, ರಾಘವೇಂದ್ರ ಆಚಾರ್ಯ ಕಟ್ಬೇಲ್ತೂರು ಉಪಸ್ಥಿತರಿದ್ದರು. ಕಚೇರಿ ಸಿಬ್ಬಂದಿ ಕಿಶೋರ ಪೂಜಾರಿ ಸಸಿಹಿತ್ಲು ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.