ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶಕ್ಕೆ
Update: 2026-06-02 21:38 IST
ಸಾಂದರ್ಭಿಕ ಚಿತ್ರ
ಕೋಟ, ಜೂ.2: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಕೋಟ ಪೊಲೀಸರು ಜೂ.1ರಂದು ಬನ್ನಾಡಿ ಗ್ರಾಮದ ಉಪ್ಲಾಡಿ ತೆಂಕಬೆಟ್ಟು ಎಂಬಲ್ಲಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಟಿಪ್ಪರ್ ಚಾಲಕ ವಾಹನ ಮತ್ತು ಮರಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಆತನನ್ನು ಟಿಪ್ಪರ್ ಮಾಲಕ ಶಶೀಧರ ಪೂಜಾರಿ ಎಂದು ಗುರುತಿಸಲಾಗಿದೆ. ಟಿಪ್ಪರ್‌ನಲ್ಲಿದ್ದ 6000ರೂ. ಮೌಲ್ಯದ ಮರಳು ಹಾಗೂ 2ಲಕ್ಷ ರೂ. ಟಿಪ್ಪರ್ ವಾಹನ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.