ನಿಷ್ಠೆ ಇದ್ದಲ್ಲಿ ಯಶಸ್ವಿ ಉದ್ಯಮ ಸಾಧ್ಯ: ಎಡಿಸಿ ಅಬೀದ್ ಗದ್ಯಾಳ್
ಬ್ರಹ್ಮಾವರ, ಜೂ.2: ಇಂದು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಲು ರುಡ್‌ಸೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯ ವಾಗಿದೆ. ಹಾಗಾಗಿ ಬದುಕಿನಲ್ಲಿ ನಿಷ್ಠೆ ಇದ್ದಲ್ಲಿ ಯಶಸ್ವಿ ಉದ್ಯಮ ಸಾಧ್ಯ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಕಾರಾಗೃಹ ಹಿರಿಯಡ್ಕ ಮತ್ತು ರುಡ್‌ಸೆಟ್ ಸಂಸ್ಥೆ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ 6 ದಿನಗಳ ಕಾಲ ನಡೆಯುವ ಉಡುಪಿ ಜಿಲ್ಲೆಯ ಕಾರಾಗೃಹ ಜೈಲುವಾಸಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಅವರು ಮಾತನಾಡುತಿದ್ದರು.
ಉದ್ಯಮದಲ್ಲಿ ಉನ್ನತಮಟ್ಟದ ಸಾಧಿಸಲು ಉದ್ಯಮದ ಕುರಿತು ನಿಷ್ಠೆ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಅದರಲಿ ಬೆಳವಣಿಗೆ ಹೊಂದಬಹುದು. ಉದ್ಯಮದಲ್ಲಿ ತೊಡಗುವಾಗ ಅದಕ್ಕೆ ತಕ್ಕುದಾದ ರಿಸ್ಕ್‌ಅನ್ನು ಎದುರಿಸ ಬೇಕಾಗು ತ್ತದೆ. ಆದ್ದರಿಂದ ಇನ್ನಷ್ಟು ಆತ್ಮಶ್ವಾಸ ಹೆಚ್ಚಾಗುತ್ತದೆ ಜೊತೆಗೆ ಹಂತ ಹಂತವಾಗಿ ಉದ್ಯಮ ಬೆಳೆಯುತ್ತದೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲೆಯ ಲೀಡ್ ಡಿಸ್ಟ್ರೀಕ್ಟ್ ಮ್ಯಾನೇಜರ್ ಹರೀಶ ಜಿ. ಮಾತನಾಡಿ, ಬ್ಯಾಂಕಿನಿಂದ ಸಿಗುವ ಸಾಲ-ಸೌಲಭ್ಯಗಳನ್ನು ಬಳಸಿ ಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಜಯಕುಮಾರ ಡಿ.ಚವ್ಹಾಣ್ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಕೆನರಾ ಬ್ಯಾಂಕ್‌ನ ವೃತ್ತ ಕಛೇರಿಯ ಮಹಾ ಪ್ರಬಂಧಕ ಗಂಗಾಧರ ಎಚ್.ಕೆ., ಉಡುಪಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್ ಬಿ., ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ.ಬೊಮ್ಮಯ್ಯ ಎಂ. ಶುಭ ಹಾರೈಸಿದರು.
ಜಿಲ್ಲಾ ಕಾರಾಗೃಹದ ಸಿಬ್ಬಂದಿ ರೇಷ್ಮಾ ನಾಯಕ್ ಸ್ವಾಗತಿಸಿದರು. ಹಿರಿಯ ಕಛೇರಿ ಸಹಾಯಕ ಶ್ರುತಿ ಪಿ.ಕುಮ್ಟಾಕರ್ ವಂದಿಸಿದರು. ಕಛೇರಿ ಸಹಾಯಕ ಶಾಂತಪ್ಪ ಕಾರ್ಯಕ್ರಮ ನಿರೂಪಿಸಿದರು.