ದನದ ಹಗ್ಗ ಕುತ್ತಿಗೆಗೆ ಸಿಕ್ಕಿ ಮಹಿಳೆ ಮೃತ್ಯು
Update: 2026-06-15 22:42 IST
ಕೊಲ್ಲೂರು, ಜೂ.15: ದನಕ್ಕೆ ಕಟ್ಟಿದ್ದ ಹಗ್ಗ ಕುತ್ತಿಗೆಗೆ ಸಿಕ್ಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಡ್ಕಲ್ ಗ್ರಾಮದ ಹೆದ್ದಾರಿ ಮನೆ ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಮೂಕಾಂಬು (61) ಎಂದು ಗುರುತಿಸ ಲಾಗಿದೆ. ಇವರು ಜೂ.6ರಂದು ಮಧ್ಯಾಹ್ನ ಮನೆಯ ದನದ ಕುತ್ತಿಗಗೆ ಬಳ್ಳಿಯನ್ನು ಕಟ್ಟಿ ಮೇಯಲು ಕರೆದುಕೊಂಡು ಹೋಗುತಿದ್ದರು. ಆಗ ಎರಡು ದನವು ಗುದ್ದಾಡಿದಾಗ, ಕೈಯಲ್ಲಿದ್ದ ದನಕ್ಕೆ ಕಟ್ಟಿದ್ದ ಹಗ್ಗ ಮೂಕಾಂಬು ಅವರ ಕುತ್ತಿಗೆಗೆ ಸಿಲುಕಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಜಿಲ್ಲಾ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೇ ಜೂ.15ರಂದು ಮೃತ ಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.