×
Ad

ಮರದಿಂದ ಬಿದ್ದ ಗಾಯಾಳು ಯುವಕ ಮೃತ್ಯು

Update: 2026-06-16 22:01 IST

ಕಾರ್ಕಳ, ಜೂ.16: ಮರದಿಂದ ಬಿದ್ದು ಗಾಯಗೊಂಡಿದ್ದ ಕಾಂತಾವರ ಗ್ರಾಮದ ಸುನೀಲ್ ಪೂಜಾರಿ (39) ಎಂಬವರು ಅನಾರೋಗ್ಯದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಇವರು 2025ರ ಮಾ.21ರಂದು ದೂಪದಕಟ್ಟೆ ಎಂಬಲ್ಲಿ ಕೂಲಿ ಕೆಲಸ ಮಾಡುವಾಗ ಮರದಿಂದ ಬಿದ್ದು ಗಾಯ ಗೊಂಡಿದ್ದರು. ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎ.21ರಂದು ಆಸ್ಪತ್ರೆಯಿಂದ ಬಿಡುಗ ಹೊಂದಿದ್ದರು. ಕಳೆದ ಸುಮಾರು 10 ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಇವರು, ಜೂ.15ರಂದು ರಾತ್ರಿ ಮಲಗಿದ್ದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News