×
Ad

ಮಂಗಳೂರು ಜಂಕ್ಷನ್-ಮುಂಬೈ ಸಿಎಸ್‌ಎಂಟಿ ರೈಲಿನ ಪ್ರಯಾಣ ಥಾಣೆಯಲ್ಲಿ ಮುಕ್ತಾಯ

Update: 2026-06-16 23:06 IST

ಉಡುಪಿ, ಜೂ.16: ಮುಂಬಯಿಯ ಸಿಎಸ್‌ಎಂಟಿ ರೈಲು ನಿಲ್ದಾಣದಲ್ಲಿ ನಡೆದಿರುವ ಪ್ಲಾಟ್‌ಫಾರಂ ವಿಸ್ತರಣೆ ಕಾಮಗಾರಿ ಇನ್ನಷ್ಟು ದಿನ ಮುಂದುವರಿ ದಿರುವ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್ ಹಾಗೂ ಮುಂಬಯಿ ಸಿಎಸ್‌ಎಂಟಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವನ್ನು ಜುಲೈ 8ರವರೆಗೆ ದಾದರ್ ಮತ್ತು ಥಾಣೆ ರೈಲು ನಿಲ್ದಾಣಗಳಿಂದ ಪ್ರಾರಂಭಿಸಿ ಅಲ್ಲೇ ಕೊನೆಗೊಳಿಸಲು ಕೇಂದ್ರ ರೈಲ್ವೆ ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲು ನಂ. 12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ ಜೂ.13ರಿಂದ ಜು.7ರವರೆಗೆ 25 ದಿನಗಳ ಕಾಲ ಥಾಣೆ ನಿಲ್ದಾಣದಲ್ಲಿ ಪ್ರಾರಂಭಗೊಂಡು ಅಲ್ಲೇ ಮುಕ್ತಾಯಗೊಳ್ಳಲಿದೆ.

ಅದೇ ರೀತಿ ಮಡಗಾಂವ್ ಜಂಕ್ಷನ್-ಮುಂಬಯಿ ಸಿಎಸ್‌ಎಂಟಿ ನಡುವೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್‌ನ ಪ್ರಯಾಣ ಜೂ.13ರಿಂದ ಜು.7ರವರೆಗೆ ದಾದರ್‌ನಲ್ಲಿ ಪ್ರಾರಂಭಗೊಂಡು ಅಲ್ಲೇ ಕೊನೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News