×
Ad

2.12 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

Update: 2026-06-16 19:13 IST

ಉಡುಪಿ, ಜೂ.16: ಗಮನಕ್ಕೆ ಬಾರದೆ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ್ ರಾವ್ ಜೂ.3ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಆಸ್ಪತ್ರೆಯ ಬಿಲ್‌ನ್ನು ಡೆಬಿಟ್ ಕಾರ್ಡ್ ಮುಖಾಂತರ ಪಾವತಿ ಮಾಡಿದ್ದರು. ನಂತರ ಸುರೇಶ್ ರಾವ್, ಯಾವುದೇ ಹಣದ ವ್ಯವಹಾರವನ್ನು ನಡೆ ಸದೇ ಇದ್ದು, ಜೂ.8ರಂದು ಇವರಿಗೆ ತನ್ನ ಖಾತೆಯಿಂದ ಹಣ ಖಡಿತಗೊಂಡಿರುವ ಬಗ್ಗೆ ಸಂದೇಶ ಬಂದಿತ್ತು.

ಈ ವಿಚಾರವಾಗಿ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಸುರೇಶ್ ರಾವ್ ಗಮನಕ್ಕೆ ಬಾರದೇ ಅವರ ಖಾತೆಯಿಂದ ಒಟ್ಟು 2,12,497ರೂ. ಹಣ ಬೇರೆ ಖಾತೆಗೆ ವರ್ಗಾವಣೆಯಾಗಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News