ಓಮ್ನಿ ಕಾರು ಡಿಕ್ಕಿ: ಪಾದಚಾರಿ ಮಹಿಳೆ ಮೃತ್ಯು
Update: 2026-06-18 21:44 IST
ಕುಂದಾಪುರ, ಜೂ.18: ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಮಹಿಳೆಯೊಬ್ಬರಿಗೆ ಅತಿ ವೇಗದಿಂದ ಬಂದ ಮಾರುತಿ ಓಮ್ನಿ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟ ಘಟನೆ ಇಂದು ಬೆಳಗ್ಗೆ 8:00ಗಂಟೆ ಸುಮಾರಿಗೆ ತಾಲೂಕಿನ ಬೀಜಾಡಿ ಗ್ರಾಮದ ಅರಸರಬೆಟ್ಟು ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಗೋಪಾಡಿ ಗ್ರಾಮದ ಚಂದ್ರಮತಿ (78) ಎಂದು ಗುರುತಿಸಲಾಗಿದೆ. ರಾಘವೇಂದ್ರ ಎಂಬವರು ತನ್ನ ಮಾರುತಿ ಓಮ್ನಿ ಕಾರನ್ನು ಕುಂಭಾಶಿ ಕಡೆಯಿಂದ ಕೊಟೇಶ್ವರ ರಥಬೀದಿ ಕಡೆಗೆ ಅತಿವೇಗದಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಚಂದ್ರಮತಿ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು.
ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.