×
Ad

ತನ್ನ ವಿರುದ್ಧ ಪತ್ನಿ ದೂರು ನೀಡಿದ ಚಿಂತೆಯಲ್ಲಿ ಪತಿ ಆತ್ಮಹತ್ಯೆ

Update: 2026-06-29 21:29 IST

ಶಂಕರನಾರಾಯಣ, ಜೂ.29: ಪತ್ನಿ ತನ್ನ ವಿರುದ್ಧ ದೂರು ನೀಡಿರುವುದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.28ರಂದು ರಾತ್ರಿ ಆಜ್ರಿ ಗ್ರಾಮದ ಹೊಳಂದೂರ ಹೆಬ್ಬಾಗಿಲು ಮನೆ ಎಂಬಲ್ಲಿ ನಡೆದಿದೆ.

ಮೃತರನ್ನು ಸಂತೋಷ ಶೆಟ್ಟಿ(47) ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಸುಮಾರು 13 ವರ್ಷಗಳ ಹಿಂದೆ ಸುಜಾತ ಎಂಬವರನ್ನು ವಿವಾಹವಾಗಿದ್ದರು. ಬಳಿಕ ಗಂಡ ಹೆಂಡತಿ ಮಧ್ಯೆ ಜಗಳಗಳು ನಡೆಯು ತ್ತಿದ್ದು, 2025ರಲ್ಲಿ ಸುಜಾತಾ, ತನ್ನ ಪತಿ ಸಂತೋಷ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ವಿಪರೀತ ಮದ್ಯ ಸೇವನೆ ಚಟ ಬೆಳೆಸಿಕೊಂಡ ಕುಡಿಯುವ ಅಭ್ಯಾಸವನ್ನು ಬೆಳಸಿಕೊಂಡಿದ್ದರು. ಇದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಪತ್ನಿ ಮನೆಯಾದ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News