ಹೆಬ್ರಿ: ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು
Update: 2026-06-29 21:31 IST
ಹೆಬ್ರಿ, ಜೂ.29: ಹೆಬ್ರಿ ಪೊಲೀಸ್ ಠಾಣೆಗೆ ಅರ್ಜಿ ವಿಚಾರಣೆಗಾಗಿ ಬಂದ ಮಹಿಳೆಯೊಬ್ಬರು ತೀವ್ರವಾಗಿ ಅಸ್ವಸ್ಥ ಗೊಂಡು ಮೃತಪಟ್ಟ ಘಟನೆ ಜೂ.28ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಶಿವಪುರ ಗ್ರಾಮದ ಸುಶೀಲಾ(74) ಎಂದು ಗುರುತಿಸಲಾಗಿದೆ. ಇವರು ತನ್ನ ಇಬ್ಬರು ಮಕ್ಕಳು ಹಾಗೂ ಸೊಸೆಯೊಂದಿಗೆ ಅರ್ಜಿ ವಿಚಾರಣೆ ಸಲುವಾಗಿ ಹೆಬ್ರಿ ಪೊಲೀಸ್ ಠಾಣೆಗೆ ಬಂದಿದ್ದರು. ಆ ವೇಳೆ ತೀವ್ರವಾಗಿ ಅಸ್ವಸ್ಥ ಗೊಂಡ ಸುಶೀಲಾ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಇವರ ಮರಣಕ್ಕೆ ಲಕ್ಷೀ ಹಾಗೂ ಪ್ರತಿಮಾ ಅವರ ಕಿರುಕುಳ ಕಾರಣ ಆಗಿರುವ ಬಗ್ಗೆ ಸಂಶಯವಿರುವುದಾಗಿ ಮೃತರ ಪುತ್ರ ರಮೇಶ್ ನಾಯ್ಕ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.