×
Ad

ಮರ ಬಿದ್ದು ಅಂಗನವಾಡಿ ಕೇಂದ್ರಕ್ಕೆ ಹಾನಿ: ಶಾಸಕರಿಂದ ಪರಿಶೀಲನೆ

Update: 2026-07-08 19:59 IST

ಮಲ್ಪೆ, ಜು.8: ಮಲ್ಪೆ ಫಿಷರೀಸ್ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಛಾವಣಿಗೆ ಗಾಳಿ ಮಳೆಯಿಂದಾಗಿ ಮರಬಿದ್ದು ಹಾನಿಗೀಡಾದ ಹಿನ್ನಲೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊನ್ನೆ ಸುರಿದ ಗಾಳಿ ಮಳೆಗೆ ಅಂಗನವಾಡಿ ಕೇಂದ್ರದ ಮೇಲೆ ಮರಬಿದ್ದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕವಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಪ್ರೌಢಶಾಲೆ ವಿಭಾಗದ ರಂಗ ಮಂದಿರಕ್ಕೆ ಸ್ಥಳಾಂತರಿ ಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.

ನೂತನ ಅಂಗನವಾಡಿ ಕೇಂದ್ರ ನಿರ್ಮಿಸಲು ತಕ್ಷಣ ಕಂದಾಯ ಇಲಾಖೆಯ ಮೂಲಕ ನಿವೇಶನ ಗುರುತಿಸಿ, ಅಂಗನವಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ಹೇರೂರು, ಮಾಜಿ ನಗರಸಭೆ ಸದಸ್ಯರಾದ ಎಡ್ಲಿನ್ ಕರ್ಕಡ, ಸುಂದರ ಕಲ್ಮಾಡಿ, ನಾರಾಯಣ ಕುಂದರ್, ಸ್ಥಳೀಯ ಪ್ರಮುಖರಾದ ಲಕ್ಷ್ಮೀಶ ಬಂಗೇರ, ವಿನಯ ಕುಮಾರ್, ಸುಶಾಂತ್, ಮಂಜು ಕೊಳ, ಸುರೇಶ್ ಕುಂದರ್, ಕೃಷ್ಣಪ್ಪ ಜತ್ತನ್, ನಿತಿನ್ ಪೂಜಾರಿ, ಸುಧಾಕರ ಕುಂದರ್, ವಿನೋದ್ ಹೊಸಕಟ್ಟ, ಅಂಗನವಾಡಿ ಕಾರ್ಯಕರ್ತೆ ರಾಧಿಕಾ ಕೋಟ್ಯಾನ್, ಸಹಾಯಕಿ ರೇಣುಕಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News