ಅರಿವು ಸಾಲ ಯೋಜನೆ: ಅರ್ಜಿ ಆಹ್ವಾನ
ಉಡುಪಿ, ಜು.27: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಸಿಇಟಿ, ಜೆಇಇ, ನೀಟ್, ಪಿಜಿಸಿಇಟಿ, ಸಿಎಲ್‌ಎಟಿ ಹಾಗೂ ಐಸಿಎಆರ್ ಮೂಲಕ ಆಯ್ಕೆಯಾಗುವ ಅಥವಾ ನ್ಯಾಕ್ ‘ಎ’ ಗ್ರೇಡ್ ಅಥವಾ ಅದಕ್ಕಿಂತ ಹೆಚ್ಚಿನ ಮಾನ್ಯತೆ ಹೊಂದಿರುವ ಅಥವಾ ಎನ್.ಐ.ಆರ್.ಎಫ್ ಶ್ರೇಯಾಂಕದ ಅಗ್ರ 100 ಸ್ಥಾನಗಳಲ್ಲಿರುವ ಕಾಲೇಜು, ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳು ನಡೆಸುವ ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆಯಾಗುವ ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್, ಬಿ.ಇ, ಬಿ.ಟೆಕ್, ಎಂ.ಇ., ಎಂ.ಟೆಕ್, ಬಿ.ಡಿ.ಎಸ್, ಎಂ.ಡಿ.ಎಸ್, ಬಿ.ಆಯುಷ್, ಎಂ.ಆಯುಷ್, ಎಂ.ಬಿ.ಎ, ಎಂ.ಸಿ.ಎ, ಎಲ್.ಎಲ್.ಬಿ, ಬಿ.ಆರ್ಚ್, ಎಂ.ಆರ್ಚ್, ಬಿ.ಎಸ್ಸಿ ಅಗ್ರಿಕಲ್ಚರ್, ಅಗ್ರಿ ಕಲ್ಚರ್ ಎಂಜಿನಿಯರಿಂಗ್, ಹಾರ್ಟಿಕಲ್ಚರ್, ಡೈರಿ ಟೆಕ್ನಾಲಜಿ, ಫಾರೆಸ್ಟ್ರೀ, ವೆಟರ್ನರಿ ಅನಿಮಲ್ ಸೈನ್ಸ್, ಫುಡ್ ಟೆಕ್ನಾಲಜಿ, ಬಯೋಟೆಕ್ನಾಲಜಿ, ಫಿಶರೀಸ್, ಸೆರಿಕಲ್ಚರ್, ಹೋಮ್ / ಕಮ್ಯುನಿಟಿ ಸೈನ್ಸಸ್, ಫುಡ್, ನ್ಯೂಟ್ರಿಷನ್ ಡಯಟಿಟಿಕ್ಸ್, ಅಗ್ರಿಕಲ್ಚರ್ ಇಂಜಿನಿಯರಿಂಗ್, ಬಿ.ಫಾರ್ಮಾ, ಎಂ.ಫಾರ್ಮಾ, ಫಾರ್ಮಾ ಡಿ, ಡಿ ಫಾರ್ಮಾ, ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಕೋರ್ಸುಗಳಿಗೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸದ ವರ್ಗಕ್ಕೆ ಅನುಗುಣವಾಗಿ ಕೋರ್ಸ್ ಪೂರ್ಣಗೊಳ್ಳುವವರೆಗೆ ಅರಿವು ಸಾಲ ಯೋಜನೆಯಡಿಯಲ್ಲಿ ಪ್ರತಿ ವರ್ಷಕ್ಕೆ ಗರಿಷ್ಟ ರೂ. 5 ಲಕ್ಷದವರೆಗೆ ಹಾಗೂ ಒಟ್ಟು ಅವಧಿಗೆ 20 ಲಕ್ಷ ರೂ.ಗಳವರೆಗೆ ಶೇ.2ರ ಸೇವಾ ಶುಲ್ಕದೊಂದಿಗೆ ಸಾಲ ಮಂಜೂರು ಮಾಡಲಾಗುತ್ತಿದೆ.
ಈ ಸಾಲ ಪಡೆಯಲು ಅಪೇಕ್ಷಿಸುವ ವಿದ್ಯಾರ್ಥಿಗಳು ನಿಗಮದ ವೆಬ್‌ಸೈಟ್ - kccdclonline.karnataka.gov.in-ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಅಗತ್ಯ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಮೌಲಾನಾ ಅಜಾದ್ ಭವನ, 1ನೇ ಮಹಡಿ, ಪಶು ಚಿಕಿತ್ಸಾಲಯದ ಹತ್ತಿರ, ಅಲೆವೂರು ರಸ್ತೆ, ಶಿವಳ್ಳಿ ಗ್ರಾಮ, ಮಣಿಪಾಲ ಉಡುಪಿ ತಾಲೂಕು-576104 ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ: 0820- 2574990, ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ದೂ.ಸಂಖ್ಯೆ: 0820-2574596 ಅಥವಾ ಕಾರ್ಕಳ (ದೂ.ಸಂಖ್ಯೆ: 08258-231101) ಹಾಗೂ ಕುಂದಾಪುರ (ದೂ.ಸಂಖ್ಯೆ: 08254-230370) ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.