ಯುವಕ ನಾಪತ್ತೆ

Update: 2026-07-28 21:02 IST

ಉಡುಪಿ, ಜು.28: ತಾಲೂಕಿನ ಪಡುಬಿದ್ರಿ ನಾಡ್ಸಾಲು ಗ್ರಾಮದ ಕಂಚಿನಡ್ಕ ನಿವಾಸಿ ಗಾರೆ ಕೆಲಸ ಮಾಡಿಕೊಂಡಿ ರುವ ರವೀಂದ್ರ(35) ಎಂಬವರು ಜು.14ರಂದು ಕೆಲಸ ಮಾಡುತ್ತಿದ್ದ ಅರೆಹಳ್ಳಿಯಿಂದ ಪಡುಬಿದ್ರೆಗೆ ವಾಪಾಸು ಬಂದಿದ್ದು, ಜು.15ರಂದು ಅಪರಾಹ್ನ 1:00 ಗಂಟೆಗೆ ಪಡುಬಿದ್ರಿ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಇದುವರೆಗೂ ಮನೆಗೆ ವಾಪಾಸಾಗದೇ ನಾಪತ್ತೆಯಾಗಿದ್ದಾರೆ.

5ಅಡಿ 6 ಇಂಚು ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರು ದೂ.ಸಂ: 9480805450, 0820-2555452, ಕಾಪು ವೃತ್ತ ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂ: 9480805431, 0820-2552133, ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 0820-2525444ಅನ್ನು ಸಂಪರ್ಕಿಸುವಂತೆ ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News