ಪ್ರವಾಸೋದ್ಯಮದ ಉತ್ತೇಜನಕ್ಕೆ ಮ್ಯಾಸ್ಕಾಟ್ ವಿನ್ಯಾಸ ಸ್ಪರ್ಧೆ

Update: 2026-07-28 20:41 IST

ನಿಟ್ಟೆ (ಕಾರ್ಕಳ), ಜು.28: ಉಡುಪಿ ಜಿಲ್ಲಾಡಳಿತ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಉಪಕ್ರಮದ ಭಾಗವಾಗಿ ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮ್ಯಾಸ್ಕಾಟ್ ವಿನ್ಯಾಸ ಸ್ಪರ್ಧೆ -ಸ್ಪಿರಿಟ್ ಆಫ್ ಉಡುಪಿ- ಯನ್ನು ನಡೆಸಲಾಯಿತು.

ನಿಟ್ಟೆ ತಾಂತ್ರಿಕ ಕಾಲೇಜು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಗೊತ್ತುಪಡಿಸಿದ ನೋಡಲ್ ಕೇಂದ್ರಗಳಲ್ಲಿ ಒಂದಾಗಿದೆ. ನಿಟ್ಟೆ ತಾಂತ್ರಿಕ ಕಾಲೇಜಿನ ಎನ್‌ಎಸ್‌ಎಸ್ ಘಟಕವು ರಚನಾ ಕ್ಲಬ್ ಸಹಯೋಗದೊಂದಿಗೆ ಸಂಸ್ಥೆಯ ಆಂಫಿಥಿಯೇಟರ್‌ನಲ್ಲಿ ಸ್ಪರ್ಧೆಯನ್ನು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿಎನ್‌ಎಂಎಂಐಟಿ ನಿಟ್ಟೆ, ಶ್ರೀನಿವಾಸ ವಿಶ್ವವಿವಿದ್ಯಾಲಯ ದ ವಿದ್ಯಾರ್ಥಿಗಳು ಮತ್ತು ನಿಟ್ಟೆಯ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ 26 ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಜಿಲ್ಲೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯಗಳು, ಪ್ರವಾಸೋದ್ಯಮ ಆಕರ್ಷಣೆಗಳು ಮತ್ತು ವಿಶಿಷ್ಟ ಗುರುತಿನಿಂದ ಪ್ರೇರಿತವಾದ ಮ್ಯಾಸ್ಕಾಟ್ ವಿನ್ಯಾಸಗಳ ಮೂಲಕ ಸ್ಪರ್ಧಿಗಳು ಉಡುಪಿಯ ಸಾರವನ್ನು ಸೃಜನಾ ತ್ಮಕವಾಗಿ ಚಿತ್ರಿಸಿದರು. ಉಡುಪಿ ಜಿಲ್ಲೆಯ ಬೃಹತ್ ಪ್ರವಾಸೋದ್ಯಮ ಬ್ರ್ಯಾಂಡಿಂಗ್ ಅಭಿಯಾನದ ಭಾಗವಾಗಿ ನೋಡಲ್ ಕೇಂದ್ರಗಳಿಂದ ಆಯ್ದ ನಮೂದುಗಳನ್ನು ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನಕ್ಕೆ ಕಳುಹಿಸಲಾಗುವುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News