ಯುವತಿ ನಾಪತ್ತೆ
Update: 2026-07-28 21:05 IST
ಉಡುಪಿ, ಜು.28: ತಾಲೂಕಿನ ಕೊಡವೂರು ಗ್ರಾಮದ ವಡಭಾಂಡೇಶ್ವರ ದೇವಸ್ಥಾನ ಬಳಿ ವಾಸವಾಗಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿರುವ ದೀಕ್ಷಾ(20) ಎಂಬ ಯುವತಿ, ಜುಲೈ 21ರಂದು ಕೆಲಸ ಮಾಡಿಕೊಂಡಿದ್ದ ಬೇಕರಿಯಲ್ಲಿ ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಕೆಲಸಕ್ಕೂ ಬಾರದೇ, ಮನೆಗೂ ಮರಳದೇ ನಾಪತ್ತೆಯಾಗಿದ್ದಾರೆ.
5 ಅಡಿ ಎತ್ತರ, ಬಿಳಿ ಮೈಬಣ್ಣ ಹೊಂದಿದ್ದು ಕನ್ನಡ ಹಾಗೂ ತುಳು ಭಾಷೆ ಮಾತಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣಾ ದೂ.ಸಂ: 0820-2537999, ಮಲ್ಪೆ ಪಿ.ಎಸ್.ಐ ದೂ.ಸಂ: 9480805447, ಮಲ್ಪೆ ವೃತ್ತ ನಿರೀಕ್ಷಕರ ದೂ.ಸಂ: 9480805430 ಅನ್ನು ಸಂಪರ್ಕಿಸುವಂತೆ ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.