ಯುವತಿಗೆ ಜೀವಬೆದರಿಕೆ: ಕಾನೂನು ಕ್ರಮಕ್ಕೆ ಕರವೇ ಆಗ್ರಹ
ಉಡುಪಿ, ಆ.9: ಅಪಘಾತಕ್ಕೀಡಾದ ವ್ಯಕ್ತಿಯೊಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ನಡೆದ ಅನ್ಯಾಯ ಮತ್ತು ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಿದ ಯುವತಿಗೆ ಜೀವ ಬೆದರಿಕೆಯೊಡ್ಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಉಡುಪಿ ನಗರ ಠಾಣೆಗೆ ಭೇಟಿ ನೀಡಿ ಆಗ್ರಹಿಸಿದ್ದಾರೆ.
ಉಡುಪಿಯ ಅಕ್ಷಿತಾ ಪೂಜಾರಿ ಸಮಾಜಮುಖಿ ಕಳಕಳಿಯಿಂದ ಅನ್ಯಾಯವನ್ನು ಪ್ರಶ್ನಿಸಿದ ಬಳಿಕ ಬೆದರಿಕೆ ಕರೆಗಳನ್ನು ಎದುರಿಸಿದ್ದು, ಇವರಿಗೆ ಬೆಂಬಲವಾಗಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅ.ರಾ. ಪ್ರಭಾಕರ್ ಪೂಜಾರಿ ನೇತೃತ್ವದಲ್ಲಿ ಠಾಣೆಗೆ ಭೇಟಿ ನೀಡಿ ಬೆದರಿಕೆ ನೀಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕರವೇ ಸಾಮಾಜಿಕ ಜಾಲತಾಣ ಸಂಚಾಲಕ ಪುರುಷೋತ್ತಮ್ ಪೂಜಾರಿ, ಮುಖಂಡರಾದ ಕುಶಾಲ್ ಅಮೀನ್, ಶಿವ ಆರ್.ಪೂಜಾರಿ ಸಿರಾಜುದ್ದೀನ್, ಗೋಪಾಲ ದೊರೆ, ಅಯ್ಯಪ್ಪ, ಸಚಿನ್ ಖಾರ್ವಿ, ಗುರು ಪ್ರಸಾದ್ ಖಾರ್ವಿ, ಅಶ್ವಿನಿ ನಾಯ್ಕ್, ಅನುಷಾ, ಜಯಶ್ರೀ, ಸುನಂದಾ ಟಿ.ಕೋಟ್ಯಾನ್, ಅಕ್ಷಿತಾ ಪೂಜಾರಿ, ಧನುಷ, ಪವಿತ್ರ ಶೆಟ್ಟಿ, ವಿಜಯಲಕ್ಷ್ಮಿ ಅನುಸೂಯ ನಾಯಕ್ ಉಷಾ ಉಪಸ್ಥಿತರಿದ್ದರು.