ಉಡುಪಿ ಜಿಲ್ಲೆಯಲ್ಲಿ 31.4 ಮಿ.ಮೀ ಸರಾಸರಿ ಮಳೆ
Update: 2026-08-09 19:46 IST
ಉಡುಪಿ, ಆ.9: ಉಡುಪಿ ಜಿಲ್ಲೆಯಾದ್ಯಂತ ಕಳೆದ 24ಗಂಟೆ ಅವಧಿಯಲ್ಲಿ ಸರಾಸರಿ 31.4 ಮಿ.ಮೀಟರ್ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ ತಾಲೂಕಿನಲ್ಲಿ 40.3ಮಿ.ಮೀ., ಕುಂದಾಪುರ- 24.5ಮಿ.ಮೀ., ಉಡುಪಿ-19.0ಮಿ.ಮೀ., ಬೈಂದೂರು-37.7ಮಿ.ಮೀ., ಬ್ರಹ್ಮಾವರ- 27.3ಮಿ.ಮೀ., ಕಾಪು- 7.7ಮಿ.ಮೀ., ಹೆಬ್ರಿ- 47.1ಮಿ.ಮೀ. ಮಳೆಯಾಗಿದೆ.
ಗಾಳಿಮಳೆಯಿಂದ ಕಾಪು ತಾಲೂಕಿನ ಎಲ್ಲೂರು ಗ್ರಾಮದ ರೇವತಿ ಎಂಬವರ ಮನೆಗೆ ಭಾಗಶಃ ಹಾನಿಯಾಗಿದ್ದು, ಇದರಿಂದ ಸುಮಾರು 65,000ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.