ಮಕ್ಕಳ ಯಶಸ್ಸಿನಲ್ಲಿ ತಂದೆತಾಯಿ ಪಾಲುದಾರರು: ಡಾ.ಮನೋಜ್ ರಾಜನ್
ದಿ.ಎಂ. ಮಧುಕರ ಶೆಟ್ಟಿ ಐಪಿಎಸ್ ಸಂಸ್ಮರಣಾ ಪ್ರಶಸ್ತಿ ಪ್ರದಾನ
ಕುಂದಾಪುರ: ಸಂಪನ್ಮೂಲವಾದ ಸಮಯವನ್ನು ವ್ಯರ್ಥ ಮಾಡದೇ ಸದ್ಭಳಕೆ ಮಾಡುವುದರಿಂದ ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ಸು ಕಾಣಬಹುದು. ಶಾಲೆಗೆ ದಾಖಲಾತಿ ಮಾಡುವ ಜೊತೆಗೆ ಮಕ್ಕಳ ಭವಿಷ್ಯ ರೂಪಿಸುವ ಹೊಣೆಗಾರಿಕೆ ಪೋಷಕರದ್ದಾಗಿದೆ. ಮಕ್ಕಳ ಯಶಸ್ಸಿನಲ್ಲಿ ತಂದೆ- ತಾಯಿ ಪಾಲುದಾರರು ಎಂದು ರಾಜ್ಯದ ಪ್ರಧಾನ ಮುಖ್ಯ ಪರಿಸರ ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಡಾ.ಮನೋಜ್ ರಾಜನ್ ಹೇಳಿದ್ದಾರೆ.
ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ರವಿವಾರ ಕುಂದಾಪುರ ಬಂಟರ ಯಾನೆ ನಾಡವರ ಸಂಕೀರ್ಣದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ವಿದ್ಯಾ ದೀವಿಗೆ ಹಸ್ತಾಂತರ, ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ದಿ.ಎಂ.ಮಧುಕರ ಶೆಟ್ಟಿ ಐಪಿಎಸ್ ಸಂಸ್ಮರಣಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಯಮಿ ಎಸ್.ಎಸ್.ಹೆಗ್ಡೆ ಉದ್ಘಾಟಿಸಿದರು. ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿವಿ ಉಪಾಧ್ಯಕ್ಷ ಡಾ. ಬಿ.ಸತೀಶ್ ಕುಮಾರ್ ಭಂಡಾರಿ, ಸುಧಾಕರ ಶೆಟ್ಟಿ, ಉದ್ಯಮಿಗಳಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಯುವ ಮೆರಿಡಿಯನ್ ಆಡಳಿತ ಪಾಲುದಾರರಾದ ಬಿ. ಉದಯ ಕುಮಾರ್ ಶೆಟ್ಟಿ, ಬಿ.ವಿನಯ ಕುಮಾರ್ ಶೆಟ್ಟಿ, ಉದ್ಯಮಿಗಳಾದ ದಯಾನಂದ ಶೆಟ್ಟಿ ಅಂಕದಕಟ್ಟೆ, ಹೈದ್ರಾಬಾದಿನ ಎಚ್.ಚಂದ್ರ ಶೆಟ್ಟಿ, ಸಂತೋಷ ಶೆಟ್ಟಿ ಹಡಾಳಿ, ಭದ್ರಾವತಿಯ ದಿವಾಕರ ಶೆಟ್ಟಿ, ಜಡ್ಡಾಡಿ ವಿಜಯ ಶೆಟ್ಟಿ, ಕುದ್ರುಕೋಡು ಜಗದೀಶ ಶೆಟ್ಟಿ, ಗಿಳಿಯಾರು ಶ್ರೀಧರ ಶೆಟ್ಟಿ, ಕಟ್ಕೆರೆ ಪ್ರೇಮಾನಂದ ಶೆಟ್ಟಿ, ಹೊಸೂರು ಚಂದ್ರಶೇಖರ ಶೆಟ್ಟಿ, ಹುಂತ್ರಿಕೆ ಸುಧಾಕರ ಶೆಟ್ಟಿ, ಅಲ್ತಾರು ಜಯರಾಮ ಶೆಟ್ಟಿ, ಬೈಂದೂರಿನ ಗೋಕುಲ್ ಶೆಟ್ಟಿ, ವಿಜಯಾನಂದ ಶೆಟ್ಟಿ ಹಳ್ನಾಡು, ಬಂಟರ ಕ್ರೆಡಿಟ್ ಸಹಕಾರಿ ಸಂಘ ಅಧ್ಯಕ್ಷ ಆವರ್ಸೆ ಸುಧಾಕರ ಶೆಟ್ಟಿ, ಸಟ್ವಾಡಿ ವಿಜಯ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕುಂದಾಪುರದ ಸಂಚಾಲಕ ಸಂಪತ್ ಕುರ್ಮಾ ಶೆಟ್ಟಿ ಕಾವ್ರಾಡಿ, ಹಿರಿಯ ವಕೀಲ ಟಿ.ಬಿ.ಶೆಟ್ಟಿ, ಡಾ.ರಂಜಿತ್ ಕುರ್ಮಾ ಶೆಟ್ಟಿ, ಎಸ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಮಹೇಶ್ ಹೆಗ್ಡೆ, ಸಂಘದ ವತ್ಸಲಾ ದಯಾನಂದ ಶೆಟ್ಟಿ, ಮುರಳೀಧರ ಶೆಟ್ಟಿ, ಭರತ್ ರಾಜ್ ಶೆಟ್ಟಿ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಉಪಸ್ಥಿತರಿದ್ದರು.
ಎಸೆಸೆಲ್ಸಿ -ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ 160ಕ್ಕೂ ಮಿಕ್ಕಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸರಕಾರಿ ಶಾಲೆಗಳ 400 ಮಕ್ಕಳಿಗೆ ವಿದ್ಯಾ ದೀವಿಗೆ ಶೈಕ್ಷಣಿಕ ನೆರವನ್ನು ಹಸ್ತಾಂತರಿಸಲಾಯಿತು. ಜಾಗತಿಕ ಬಂಟರ ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಅವರಿಗೆ ದಿ.ಯಡ್ತರೆ ನರಸಿಂಹ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ, ಉದ್ಯಮಿ ಎಸ್.ಎಸ್.ಹೆಗ್ಡೆಯವರಿಗೆ ದಿ.ಅಪ್ಪಣ್ಣ ಹೆಗ್ಡೆ ಸಂಸ್ಮರಣಾ ಪ್ರಶಸ್ತಿ, ಹಿರಿಯ ವಕೀಲ ಎ.ಬಿ.ಶೆಟ್ಟರಿಗೆ ದಿ| ಕುಶಲ ಹೆಗ್ಡೆ ಶತಮಾನೋತ್ಸವ ಪ್ರಶಸ್ತಿ, ಗುಡ್ಡಮ್ಮಾಡಿಯ ಕೃಷಿಕ ಅರುಣ್ ಕುಮಾರ್ ಶೆಟ್ಟಿಯವರಿಗೆ ದಿ| ಗೋಪಾಲಕೃಷ್ಣ ಶೆಟ್ಟಿ ಸಂಸ್ಮರಣಾ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ಥಾಪಕಾಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಸ್ವಾಗತಿಸಿ, ಹಳ್ನಾಡು ಪ್ರತಾಪಚಂದ್ರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಚಿನ್ ಕುಮಾರ್ ಶೆಟ್ಟಿ ಹುಂಚನಿ ಕಾರ್ಯಕ್ರಮ ನಿರೂಪಿಸಿದರು.