ಅವಕಾಶ ವಂಚಿತ ಸಮುದಾಯಗಳು ದೇವರಾಜು ಅರಸರನ್ನು ಮರೆಯಲಾಗದು: ಮೀನಾಕ್ಷಿ

Update: 2026-08-22 18:54 IST

ಉಡುಪಿ, ಆ.22: ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮಾನತೆಯ ಪ್ರಜಾಸತ್ತಾತ್ಮಕ ಹೊಣೆಗಾರಿಕೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ತಬ್ಬಲಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಮುಂಚಲನೆಯನ್ನು ಸಾಧ್ಯವಾಗಿಸಿ ಕರ್ನಾಟಕವನ್ನು ಕತ್ತಲೆಯಿಂದ ಪಾರುಮಾಡಿದ ಧೀಮಂತ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಅವರನ್ನು ಈ ನಾಡಿನ ಅವಕಾಶ ವಂಚಿತ ಸಮುದಾಯಗಳೆಲ್ಲವೂ ಮರೆಯದೇ ನೆನಪಿಟ್ಟುಕೊಳ್ಳಬೇಕು ಎಂದು ಹಿರಿಯಡಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಮೀನಾಕ್ಷಿ ನಾಯ್ಕ ಹೇಳಿದ್ದಾರೆ.

ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಐಕ್ಯುಎಸಿ ಅಡಿಯಲ್ಲಿ ಕನ್ನಡ, ಸಮಾಜಶಾಸ್ತ್ರ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಹಯೋಗದೊಂದಿಗೆ ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾದ ದಿವಂಗತ ದೇವರಾಜು ಅರಸು ಅವರ 111ನೇ ಜನ್ಮ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಮಾತನಾಡಿ, ದೇವರಾಜ ಅರಸು ತನ್ನ ಇಡೀ ಆಳ್ವಿಕೆಯನ್ನು ಸಮೂಹದ ಬುದ್ಧಿಯ ವಿಕಾಸಕ್ಕೆ ಬಳಸಿದರಲ್ಲದೆ, ಬುದ್ಧಿಯ ದ್ವೇಷಕ್ಕೆ ಬಳಸಲಿಲ್ಲ ಎಂದು ತಿಳಿಸಿದರು.

ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ರಾಧಾಕೃಷ್ಣ ನಾಯಕ್, ರಾಷ್ಟ್ರೀಯ ಸೇವಾ ಕಾರ್ಯಕ್ರಮಾಧಿಕಾರಿ ನಂದೀಶ್ ಕುಮಾರ್ ಕೆ.ಸಿ., ಆಂಗ್ಲ ಭಾಷಾ ವಿಭಾಗದ ನಿಶ್ಚಿತ ಎಸ್. ಹೋಬಳಿದಾರ್, ರಾಜ್ಯಶಾಸ್ತ್ರ ವಿಭಾಗದ ಅಪರ್ಣ ಕೆ.ಯು. ಉಪಸ್ಥಿತರಿದ್ದರು.

ಅಭೀಷ ಸ್ವಾಗತಿಸಿ, ಅಕ್ಷಯಾ ವಂದಿಸಿದರು. ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News