ಯಕ್ಷಗಾನ ಕಲಾರಂಗದ 102ನೆಯ ಮನೆ ಹಸ್ತಾಂತರ

Update: 2026-08-22 19:53 IST

ಉಡುಪಿ: ಯಕ್ಷಗಾನ ಕಲಾರಂದ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೀರ್ತನಾ ಕುಟುಂಬಕ್ಕೆ ಕುಂದಾಪುರ ತಾಲೂಕಿನ ಹಳ್ಳಾಡಿಯಲ್ಲಿ ಉಡುಪಿಯ ನಿವೃತ್ತ ಉಪತಹಶೀಲ್ದಾರ್ ವಿಷ್ಣುಮೂರ್ತಿ ಭಟ್ ಇವರು ಹೆತ್ತವರ ಸಂಸ್ಮರಣೆಯಲ್ಲಿ ನಿರ್ಮಿಸಿ ಕೊಟ್ಟ ನೂತನ ಮನೆ ‘ಯಮುನಾಮಾಧವ’ದ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಬಡಕುಟುಂಬದ ಕೇಶವ ಆಚಾರ್ ಹಾಗೂ ಶ್ರೀದೇವಿ ದಂಪತಿ ಪುತ್ರಿ ಕೀರ್ತನಾ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಆಕೆಗೆ ವಿಷ್ಣಮೂರ್ತಿ ಭಟ್ ಅವರು ತಮ್ಮ ಹೆತ್ತವರಾದ ಮಾಧವ ಭಟ್ ಹಾಗೂ ಯಮುನಮ್ಮ ಅವರ ನೆನಪಿನಲ್ಲಿ ಸುಮಾರು ಏಳು ಲಕ್ಷ ರೂ. ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ಜ್ಯೋತಿ ಬೆಳಗಿಸುವ ಮೂಲಕ ಮನೆಯನ್ನು ಉದ್ಘಾಟಿಸಿದ ವಿಷ್ಣುಮೂರ್ತಿ ಭಟ್, ಯಕ್ಷಗಾನ ಕಲಾರಂಗ ಸಮಾಜಕ್ಕೆ ಮಾಡುತ್ತಿರುವ ಪ್ರಾಮಾಣಿಕ ಸೇವೆೆಗೆ ಮಾರು ಹೋಗಿದ್ದೇನೆ. ಮನೆ ನಿರ್ಮಿಸಿಕೊಡುವ ಅವಕಾಶವನ್ನು ನನಗೆ ಕಲ್ಪಿಸಿದ್ದಕ್ಕೆ ಆಭಾರಿಯಾಗಿದ್ದೇನೆ ಎಂದರು. ನಿವೃತ್ತ ಶಿಕ್ಷಕಿ ಶಕುಂತಲಾಬಾಯಿ ಅವರೂ ಯಕ್ಷಗಾನ ಕಲಾರಂಗದ ಸಮಾಜಮುಖಿ ಚಟುವಟಿಕೆಗಳನ್ನು ಶ್ಲಾಘಿಸಿದರು.

ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ನಾವುಡ ಅವರು ಕೀರ್ತನಾ ಕುಟುಂಬಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಾವಿತ್ರಿ ವಿ ಭಟ್, ಕಿರಣ್ ಕಾಪು, ಹಯಗ್ರೀವ ಭಟ್, ಗೀತಾ ಎಚ್. ಭಟ್, ರವಿಪ್ರಕಾಶ್, ಸುಮಂಗಲಾ, ಡಾ.ಬದರೀಶ, ಗಣೇಶ ತುಂಗ, ನಾರಾಯಣ ತುಂಗ, ಹೇಮಾ ಎನ್. ತುಂಗ, ಸರೋಜ, ಅನುಷಾ, ಲಕ್ಷ್ಮೀನಾರಾಯಣ ಆಚಾರ್ಯ, ನಾಗರಾಜ ಭಟ್, ಚಂದ್ರಕಾಂತ್ ಕೆ. ಎನ್, ರಂಗನಾಥ ಸಾಮಗ ಉಪಸ್ಥಿತರಿದ್ದರು.

ಕೆ.ಪಿ.ಎಸ್. ಬಿದ್ಕಲ್ಕಟ್ಟೆಯ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿ, ಗ್ರಾಪಂನ ಮಾಜಿ ಅಧ್ಯಕ್ಷೆ ದೀಪಾ ಶೆಟ್ಟಿ, ಸಂಸ್ಥೆಯ ಕೋಶಾಧಿಕಾರಿ ಕೆ.ಸದಾಶಿವ ರಾವ್, ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯಕುಮಾರ ಮುದ್ರಾಡಿ, ಯು. ಅನಂತರಾಜ ಉಪಾಧ್ಯ, ಭುವನಪ್ರಸಾದ ಹೆಗ್ಡೆ, ಡಾ.ರಾಜೇಶ್ ನಾವುಡ, ಅಶೋಕ್ ಎಂ.,ಮರ್ಣೆ ಉಮೇಶ ಭಟ್ ಭಾಗವಹಿಸಿದ್ದರು.

ಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತು ಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News