ಉಡುಪಿ, ಅ.11: ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಸುರಿದ ಗಾಳಿಮಳೆಯಿಂದ ಎರಡು ಮನೆಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 7.9 ಮಿ.ಮೀ. ಮಳೆಯಾಗಿದ್ದು, ಕಾರ್ಕಳ- 6.3ಮಿ.ಮೀ., ಕುಂದಾಪುರ- 9.9ಮಿ.ಮೀ., ಉಡುಪಿ- 9.0ಮಿ.ಮೀ., ಬೈಂದೂರು-2.2ಮಿ.ಮೀ., ಬ್ರಹ್ಮಾವರ- 17.5ಮಿ.ಮೀ., ಕಾಪು- 6.5ಮಿ.ಮೀ., ಹೆಬ್ರಿ- 5.5ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಗಾಳಿ ಮಳೆಯಿಂದ ಬೈಂದೂರು ತಾಲೂಕಿನ ಹೇರೂರು ಗ್ರಾಮದ ನಾರಾಯಣ ನಾಯ್ಕ ಎಂಬವರ ಮನೆ ಭಾಗಶಃ ಹಾನಿಯಾಗಿದ್ದು, ಸುಮಾರು 20,000ರೂ. ನಷ್ಟವಾಗಿದೆ. ಅದೇ ರೀತಿ ನಾಡ ಗ್ರಾಮದ ವೆಂಕಮ್ಮ ಪೂಜಾರ್ತಿ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ ಸುಮಾರು 20,000ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor