ಶಿಕ್ಷಣವು ಉಜ್ವಲ ಭವಿಷ್ಯದ ಅಡಿಪಾಯ: ಡಾ.ಬಿ.ಇ.ರಂಗಸ್ವಾಮಿ
ಉಡುಪಿ, ಅ.11: ಶಿಕ್ಷಣವು ಉಜ್ವಲ ಭವಿಷ್ಯದ ಅಡಿಪಾಯ. ನಾವೀನ್ಯತೆ, ಉದ್ಯಮಶೀಲತೆ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಅವಕಾಶಗಳನ್ನು ಪದವೀಧರರು ಬಳಸಿಕೊಳ್ಳಬೇಕು. ದೊಡ್ಡ ಕನಸಿನೊಂದಿಗೆ ಹೊಸ ಅವಕಾಶಗಳನ್ನು ಸೃಷ್ಠಿಸಿ ಯಶಸ್ವಿ ವೃತ್ತಿ ಜೀವನವನ್ನು ರೂಪಿಸಿಕೊಂಡು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಬೇಕು ಎಂದು ದಾವಣಗೆರೆ ವಿಶ್ವದ್ಯಾಲಯದ ಕುಲಪತಿ ಡಾ.ಬಿ.ಇ.ರಂಗಸ್ವಾಮಿ ಹೇಳಿದ್ದಾರೆ.
ಬಂಟಕಲ್‌ನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ರವಿವಾರ ನಡೆದ 13ನೇ ಪದ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಸಿದ್ದರು. ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಐಐಟಿ)ಯ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್.ದೇಸಾಯಿ, ಕಾರ್ಯ ದರ್ಶಿ ರತ್ನಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವದ್ಯಾಲಯದ 2025-26ನೇ ಸಾಲಿನಲ್ಲಿ ನಾಲ್ಕನೇ ರ್ಯಾಂಕ್ ಪಡೆದ ಸಿಂಚನ ಸನ್ಮಾನಿಸಲಾಯಿತು. ಮಂಗಳೂರಿನ ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್ ಪ್ರಾಯೋಜಿತ ಚಿನ್ನದ ಪದಕಗಳನ್ನು ಸಿಂಚನ, ಕೀರ್ತಿ, ಶಫಾಜ್, ಹರ್ಷಿತ್ ರಾಜು, ಅನ್ನಪೂರ್ಣ ಶೆಣೈ, ವಿಕಾಸ್, ರಕ್ಷಾ ಸುಬ್ರಮಣ್ಯ ಶೆಟ್ಟಿ ಇವರ ಶೈಕ್ಷಣಿಕ ಸಾಧನೆಗಾಗಿ ನೀಡ ಲಾಯಿತು.
ಆಡಳಿತ ಮಂಡಳಿಯ ಸದಸ್ಯರಾದ ಡಾ.ಗುರುರಾಜ್ ಕಿದಿಯೂರ್, ಹರೀಶ್ ಬೆಳ್ಮಣ್, ಪ್ರೊ.ಬಿಎಸ್.ರೆವಣಕರ್, ಶ್ಯಾಮಸುಂದರ್, ನಂದ ಕುಮಾರ್ ಉಪಾಧ್ಯಾಯ, ಡೀನ್‌ಗಳಾದ ಡಾ.ಸುದರ್ಶನ್ ರಾವ್, ಡಾ.ನಾಗರಾಜ್ ಭಟ್, ಡಾ.ಸಚಿನ್ ಭಟ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ನಾಗರಾಜ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ.ಸುಬ್ಬುಲಕ್ಷ್ಮಿ ಕಾರಂತ್ ಹಾಗೂ ಡಾ.ಲೊಲಿಟ ಪ್ರಿಯ ಕ್ಯಾಸ್ತಲಿನೊ ಅತಿಥಿಗಳನ್ನು ಪರಿಚುಸಿದರು. ಡಾ.ಸುದರ್ಶನ್ ರಾವ್ ಪದವೀಧರರಿಗೆ ಪ್ರಮಾಣವಚನ ಭೋದಿಸಿದರು. ಡಾ.ಸೌಮ್ಯ ಜೆ.ಭಟ್ ರ್ಯಾಂಕ್ ವಿಜೇತರ ಪಟ್ಟಿ ವಾಚಿಸಿದರು. ಡಾ.ಸಚಿನ್ ಎಸ್.ಭಟ್ ವಂದಿಸಿದರು. ಪ್ರಾಧ್ಯಾಪಕರಾದ ಸಹನ ಎಸ್.ಆರ್. ಮತ್ತು ಡಾ.ಪುನೀತ್ ಬೇಕಲ್ ನಿರೂಪಿಸಿದರು.