ಉಡುಪಿ, ಅ.23: ಉಡುಪಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಇಂದು ಸಂಜೆ 4ಗಂಟೆ ಸುಮಾರಿಗೆ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಸುರಿಯಿತು. ಅಪರಾಹ್ನ ಎರಡು ಗಂಟೆಗೆ ಪ್ರಾರಂಭಗೊಂಡ ಮಳೆ, ನಾಲ್ಕು ಗಂಟೆಯ ಬಳಿಕ ಜೋರಾಗಿ ಸುರಿಯಿತು. ಜೊತೆಗೆ ಗುಡುಗು-ಮಿಂಚು ಅಧಿಕ ಪ್ರಮಾಣದಲ್ಲಿತ್ತು.

ಗುರುವಾರ ರಾತ್ರಿಯಿಂದಲೇ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ ಸುರಿದಿತ್ತು. ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಚಂದ್ರಯ್ಯ ಆಚಾರ್ ಅವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಯಿತು. ಇದರಿಂದ ಸುಮಾರು 50,000ರೂ. ನಷ್ಟದ ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ ಇಂದು 23.6ಮಿ.ಮೀ. ಮಳೆಯಾಗಿದೆ. ಕಾಪುವಿನಲ್ಲಿ ಅತ್ಯಧಿಕ 31.4ಮಿ.ಮೀ. ಮಳೆಯಾದರೆ, ಕಾರ್ಕಳ ದಲ್ಲಿ 31.2, ಬೈಂದೂರಿನಲ್ಲಿ 30.1, ಕುಂದಾಪುರದಲ್ಲಿ 22.5, ಉಡುಪಿಯಲ್ಲಿ 19.4, ಬ್ರಹ್ಮಾವರದಲ್ಲಿ 14.2, ಹೆಬ್ರಿಯಲ್ಲಿ 12.9ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor