ಕುಂದಾಪುರ, ಅ.26: ಕರಾವಳಿಯಲ್ಲಿ ಕ್ರೈಸ್ತ ಸಮಾಜದ ಪ್ರಗತಿಗೆ ಕಥೊಲಿಕ್ ಸಭಾ ಕೊಡುಗೆ ವಿಶೇಷವಾಗಿದೆ. ಸಮಾಜ, ಸಾಮಾಜಿಕವಾಗಿ, ರಾಜಕೀಯ ವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಠರಾಗಿ ಸಾಮಾಜ ಬೆಳವಣಿಗೆಗೆ ಹೊಂದಬೇಕಾದರೆ ನಾಯಕತ್ವಕ್ಕೆ ಬದಲಾವಣೆ ಹಾಗೂ ಪರಿಸ್ಥಿತಿಯ ಅರಿವು ಇರಬೇಕು. ಸದಾ ಹೊಸತನದೊಂದಿಗೆ ದೇಶದ ಏಳಿಗೆಗೆ ಶ್ರಮಿಸಬೇಕು ಎಂದು ದಾಯ್ಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಹೇಳಿದ್ದಾರೆ.

ಕುಂದಾಪುರ ಸೇಂಟ್ ಮೇರಿಸ್ ಸಭಾಂಗಣದಲ್ಲಿ ನಡೆದ ಕಥೊಲಿಕ್ ಸಭಾ ವಲಯ ಮಟ್ಟದ ಮುಖಂಡರ ಸಹಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

1990 ರಲ್ಲಿ ಆರಂಭಗೊಂಡು, ಕಳೆದ 36 ವರ್ಷಗಳಿಂದ ಸೇವೆಯನ್ನು ಸಲ್ಲಿಸಿದ 12 ಚರ್ಚ್‌ಗಳ ಘಟಕ ಹಾಗೂ ವಲಯದ ಅಧ್ಯಕ್ಷರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂ.ಪೌಲ್ ರೇಗೂ ಸಂದೇಶ ನೀಡಿದರು

ಶೆವೊಟ್ ಪ್ರತಿಷ್ಠಾನದ ಅಧ್ಯಕ್ಷ ಎಲ್ರಾಯ್ ಕಿರಣ್ ಕ್ರಾಸ್ಟೊ, ಕಥೊಲಿಕ್ ಸಭೆ ನಡೆದು ಬಂದ ದಾರಿಯನ್ನು ವಿವರಿಸಿ ದರು. ಸಭೆಯ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷೆ ಶೈಲಾ ಅಲ್ಮೆಡಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚಿಗೆ ಎಐಸಿಯು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಆಲ್ವಿನ್ ಕ್ವಾಡ್ರಸ್ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಸರಕಾರದಿಂದ ಆಯ್ಕೆಯಾದ ಪಿಯುಸ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ರೇಮಿ ಫೆರ್ನಾಂಡಿಸ್ ಹಾಗೂ ಕೋಶಾಧಿಕಾರಿ ರೀಟಾ ಕ್ವಾಡ್ರಸ್ ಉಪಸ್ಥಿತರಿದ್ದರು. ವಲಯ ಸಮಿತಿಯ ಮಾಜಿ ಅಧ್ಯಕ್ಷ ರುಫಸ್ ಬರೆಟ್ಟೊ, ವಿನೋದ್ ಕ್ರಾಸ್ಟೊ ಹಾಗೂ ಕೋಟ ಘಟಕದ ಅಧ್ಯಕ್ಷ ವಿಲ್ಟನ್ ಒಲಿವೇರಾ ಸನ್ಮಾನಿತರು ಹಾಗೂ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಚಾಲಕಿ ಆಶಾ ಕರ್ವಾಲೋ ನಿರೂಪಿಸಿ, ವಲಯ ಸಮಿತಿಯ ಆಮ್ಚೊಂ ಸಂದೇಶ್ ಪತ್ರಿಕಾ ಪ್ರತಿನಿಧಿ ಮೇಬಲ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor