ಸಾಮಾಜಿಕ ಕಾರ್ಯಕರ್ತ ಸುನೀಲ್ ಬೈಲಕರೆ ನಿಧನ
ಉಡುಪಿ, ಅ.26: ಗಾಜಿನ ಬ್ಲಾಕ್‌ಗಳನ್ನು ಅನ್‌ಲೋಡ್ ಮಾಡುವ ವೇಳೆ ಇಂದು ಅವಘಡ ಸಂಭವಿಸಿ ಸಾಮಾಜಿಕ ಕಾರ್ಯಕರ್ತ ಉಡುಪಿಯ ಸುನೀಲ್ ಬೈಲಕೆರೆ(45) ಮೃತಪಟ್ಟ ಬಗ್ಗೆ ವರದಿಯಾಗಿದೆ.
ಇವರು ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್‌ಗಳನ್ನು ಅನ್‌ಲೋಡ್ ಮಾಡುತ್ತಿದ್ದು, ಈ ವೇಳೆ ಅಕಸ್ಮಿಕವಾಗಿ ಗಾಜು ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.
ಇವರು ಹಿಂದಿನ ಶಿರೂರು ಶ್ರೀಗಳಾದ ದಿ.ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಆಪ್ತರಾಗಿದ್ದು, ಶ್ರೀಗಳ ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಸಮಾಜ ಸೇವೆಯನ್ನು ತೊಡಗಿಸಿಕೊಂಡಿದ್ದರು. ಇವರು ಪತ್ನಿ, ಓರ್ವ ಪುತ್ರ, ಬಂಧು ಮಿತ್ರಗಳನ್ನು ಅಗಲಿದ್ದಾರೆ.