ಬಸ್ಸಿನಿಂದ ಬಿದ್ದು ಪ್ರಯಾಣಿಕ ಮೃತ್ಯು
ಕಾರ್ಕಳ, ಅ.26: ನಿಂತಿದ್ದ ಬಸ್ಸನ್ನು ಒಮ್ಮೇಲೆ ಚಲಾಯಿಸಿದ ಪರಿಣಾಮ ಬಸ್‌ನಿಂದ ಇಳಿಯುತ್ತಿದ್ದ ಪ್ರಯಾಣಿಕರೊ ಬ್ಬರು ಕೆಳಗಡೆ ಬಿದ್ದು ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ದಿಶಾ ಹಾರ್ಡರ್ವೇ ಬಳಿ ನಡೆದಿದೆ.
ಮೃತರನ್ನು ಮಂಜುನಾಥ ಶೆಟ್ಟಿಗಾರ(80) ಎಂದು ಗುರುತಿಸಲಾಗಿದೆ. ಅ.24ರಂದು ಮಧ್ಯಾಹ್ನ ವೇಳೆ ಕಾರ್ಕಳ ಕಡೆಯಿಂದ ಜೋಡು ರಸ್ತೆಯ ಕಡೆಗೆ ಚಲಾಯಿಸಿಕೊಂಡು ಬಂದ ಬಸ್, ದಿಶಾ ಹಾರ್ಡರ್ವೇ ಬಳಿ ಪ್ರಯಾಣಿಕ ರನ್ನು ಇಳಿಸಲು ನಿಂತಿತ್ತು. ಈ ವೇಳೆ ಬಸ್ಸಿನ ಹಿಂಬದಿಯ ಬಾಗಿಲಿನಿಂದ ಮಂಜುನಾಥ ಶೆಟ್ಟಿಗಾರ ಕೆಳಗಡೆ ಇಳಿಯುತ್ತಿರು ವಾಗ ಚಾಲಕ ಒಮ್ಮೆಲೇ ಬಸ್ಸನ್ನು ಚಲಾಯಿಸಿದನು.
ಇದರ ಪರಿಣಾಮ ಮುಂಜುನಾಥ ಶೆಟ್ಟಿಗಾರ ಆಯತಪ್ಪಿ ಬಸ್ಸಿನಿಂದ ಕೆಳಗಡೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರು, ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅ.25ರಂದು ರಾತ್ರಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.