ಅಜೆಕಾರು ಶಾಲೆಯ ಕಂಪ್ಯೂಟರ್ ಕಳವು
ಅಜೆಕಾರು, ಅ.28: ಕುಕ್ಕುಜೆ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ನುಗ್ಗಿದ ಕಳ್ಳರು, ಕಂಪ್ಯೂಟರ್ ಸಹಿತ ಸೊತ್ತು ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅ.24ರ ಮಧ್ಯಾಹ್ನದಿಂದ ಅ.27ರ ಬೆಳಗಿನ ಮಧ್ಯಾವಧಿಯಲ್ಲಿ ಶಾಲೆಯ ಕಂಪ್ಯೂಟರ್ ಕೊಠಡಿಯ ಕಿಟಕಿಯ ಕಬ್ಬಿಣದ ರಾಡನ್ನು ಮುರಿದ ಕಳ್ಳರು, ಕಿಟಿಕಿಯ ಪಕ್ಕ ಇರಿಸಲಾಗಿದ್ದ ಕಂಪ್ಯೂಟರ್ ಮತ್ತು ಒಂದು ಕೀ ಬೋರ್ಡ್ ಹಾಗೂ ಕಂಪ್ಯೂಟರನ ಪವರ್ ಅಡಾಪ್ಟರ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.