ಪಿಕ್ಅಪ್ ವಾಹನ ಢಿಕ್ಕಿ: ವ್ಯಕ್ತಿ ಮೃತ್ಯು
ಕಾರ್ಕಳ, ಅ.28: ಕುಕ್ಕುಂದೂರು ಗ್ರಾಮದ ನಕ್ರೆ ಜೆ.ಬಿ.ಕೊಕನಟ್ ಇಂಡಸ್ಟ್ರೀ ಬಳಿ ಪಿಕ್ಅಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅ.27ರಂದು ಸಂಜೆ ವೇಳೆ ನಡೆದಿದೆ.
ಪಿಕಪ್ ವಾಹನವನ್ನು ಚಾಲಕ ಪ್ರಸಾದ ಪೂಜಾರಿ ಯಾವುದೇ ಮುಂಜಾಗ್ರತ ಕ್ರಮವಹಿಸದೇ ನಿರ್ಲಕ್ಷತನದಿಂದ ಒಮ್ಮೆಲೇ ವೇಗವಾಗಿ ಕಟ್ಟಡದ ಒಳಗಡೆ ಚಲಾಯಿಸಿಕೊಂಡು ಬಂದಿದ್ದು, ಈ ವೇಳೆ ವಾಹನ ನಿಯಂತ್ರಣ ತಪ್ಪಿ, ಕಟ್ಟಡದ ಒಳಗಡೆ ಇದ್ದ ದಿನೇಶ ಕುಮಾರ್ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಗಂಬೀರವಾಗಿ ಗಾಯಗೊಂಡ ಅವರು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.