ಬಾಡಿಗೆ ಹಣ ಕೇಳಲು ಹೋದಾಗ ಹಲ್ಲೆ, ನಿಂದನೆ ಆರೋಪ: ಪ್ರಕರಣ ದಾಖಲು
ಕುಂದಾಪುರ, ಅ.30: ಬಾಡಿಗೆ ಹಣ ಕೇಳಲು ಹೋದಾಗ ಚಂದ್ರಶೇಖರ್ ಶೆಟ್ಟಿ ಎಂಬವರನ್ನ ಬಾಡಿಗೆದಾರ ಪ್ರಮೋದ್ ರಾವ್ ಎಂಬವವರು ನಿಂದಿಸಿ, ಹಲ್ಲೆಗೈದ ಘಟನೆ ಕೋಟೇಶ್ವರ ಬೈಪಾಸ್ ಬಳಿ ಗುರುವಾರ ಸಂಜೆ ನಡೆದಿದೆ.
ದೂರುದಾರ ಎಚ್ ರಂಜಿತ್ ಶೆಟ್ಟಿ ಎಂಬವರಿಗೆ ಸಂಬಂಧಿಸಿದಂತೆ ಕೋಟೇಶ್ವರ ಗ್ರಾಮದ ಬೈಪಾಸ್ ಬಳಿ 5 ಅಂಗಡಿಕೋಣೆ ಇದ್ದು, ಅದರಲ್ಲಿ ಒಂದು ಕೋಣೆಯನ್ನು ಪ್ರಮೋದ್ ರಾವ್ ಎಂಬುವರಿಗೆ ಬಾಡಿಗೆಗೆ ನೀಡಿದ್ದು, ಕಳೆದ 11 ತಿಂಗಳಿಂದ ಬಾಡಿಗೆ ಹಣ ನೀಡಿಲ್ಲ ಎನ್ನಲಾಗಿದೆ. ರಂಜಿತ್ ಅವರ ತಂದೆ ಬಾಡಿಗೆ ಕೇಳಲು ಹೋದಾಗ ಘಟನೆ ನಡೆದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.