ಉಡುಪಿ, ಅ.30: ಅಗ್ರಿಗೋಲ್ಡ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರದ ಸಿಐಡಿ ಅಧಿಕಾರಿಗಳು ನಾಳೆ ಶನಿವಾರ ಹೆಬ್ರಿ ತಾಲೂಕಿನ 150 ಮಂದಿ ಗ್ರಾಹಕರ ದಾಖಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ.

ಹೆಬ್ರಿ ತಾಲೂಕಿನಲ್ಲಿ ಅಗ್ರಗೋಲ್ಡ್ ಬಾಂಡ್ ಹೊಂದಿರುವ 150 ಗ್ರಾಹಕರಿಗೆ ಈಗಾಗಲೇ ಟೋಕನ್ ನೀಡಲಾಗಿದ್ದು, ಉಳಿದ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿರುವ ಗ್ರಾಹಕರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ನಾಳೆ ಅ.31ರ ಶನಿವಾರ ಹೊಸದಾಗಿ ಯಾರಿಗೂ ಟೋಕನ್ ನೀಡಲಾಗುವುದಿಲ್ಲ. ಈ ಕುರಿತಂತೆ ದೂರವಾಣಿ ಸಂಖ್ಯೆ:0820-2526444 ನ್ನು ಮಾತ್ರ ಬೆಳಗ್ಗೆ 10ರಿಂದ ಸಂಜೆ 5:00ಗಂಟೆಯವರೆಗೆ ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor