ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಗಂಗೊಳ್ಳಿ, ಅ.30: ಕುಡಿತದ ಚಟದಿಂದ ಹಾಗೂ ಸರಿಯಾದ ಉದ್ಯೋಗವಿಲ್ಲ ಎಂಬ ಕೊರಗಿನಿಂದ ಸುರೇಶ ದೇವಾಡಿಗ (40) ಎಂಬುವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಬಾರಂದಾಡಿ ಗ್ರಾಮದ ಬೆಳ್ಳಿಗದ್ದೆಯ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಇವರು ಮನೆಯ ಎದುರಿನ ದನದ ಕೊಟ್ಟಿಗೆಯ ಜಂತಿಗೆ ನೈಲಾನ್ ರೋಪಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ರತ್ನಾ ದೇವಾಡಿಗ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.